ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉಡುಪಿ : ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರ, ಗಾಲಿಕುರ್ಚಿಗಳ ವಿತರಣಾ ಕಾರ್ಯಕ್ರಮ

Posted On: 20-10-2022 11:07PM

ಉಡುಪಿ : ಸೇವಾಭಾರತಿ - ಸೇವಾಧಾಮ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಹೈಟೆಕ್‌ ಮೆಡಿಕೇರ್ ಆಸ್ಪತ್ರೆ, ಅಂಬಲಪಾಡಿ ಉಡುಪಿ, ರೋಟರಿ ಕ್ಲಬ್ ಕಾಪು, ಅಮ್ಮ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.), ಕಾಪು ಮತ್ತು ದಿವ್ಯಾಂಗ ರಕ್ಷಣಾ ಸಮಿತಿ, ಕೊಡವೂರು ಇವುಗಳ ಸಹಯೋಗದಲ್ಲಿ ಅಕ್ಟೋಬರ್ 19ರಂದು ಹೈಟೆಕ್ ಮೆಡಿಕೇರ್ ಆಸ್ಪತ್ರೆ ಅಂಬಲಪಾಡಿ ಉಡುಪಿ ಇಲ್ಲಿ 16ನೇ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ಮತ್ತು 10 ಗಾಲಿಕುರ್ಚಿಗಳ ವಿತರಣಾ ಕಾರ್ಯಕ್ರಮವನ್ನು ರೋಟರಿಯ ಝೋನ್ -5 ಸಹಾಯಕ ಗವರ್ನರ್ ರೊ. ಡಾ| ಶಶಿಕಾಂತ ಕಾರಿಂಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾಭಾರತಿ, ಬೆಳ್ತಂಗಡಿ ಅಧ್ಯಕ್ಷರಾದ ಕೆ. ವಿನಾಯಕ ರಾವ್ ವಹಿಸಿದ್ದರು.

ಈ ಸಂದರ್ಭ ಅಮ್ಮ ಚಾರಿಟೇಬಲ್ ಟ್ರಸ್ಟ್ ನ ರಮೇಶ್ ಹೆಗ್ಡೆ ಕಲ್ಯಾ, ವಿಜಯ ಕೊಡವೂರು, ರೊ. ಕೆ. ಸದಾಶಿವ ಭಟ್, ಡಾ. ಟಿ. ಎಸ್. ರಾವ್, ವಾಣಿ ವಿ. ರಾವ್, ಡಾ. ನಾಗಭೂಷಣ ಉಡುಪ, ಡಾ. ಉಮೇಶ್ ಪ್ರಭು, ಡಾ. ಎಸ್. ಪಿ. ಮೋಹಂತಿ, ಡಾ. ಈಶ್ವರ್ ಕೀರ್ತಿ ಸಿ, ರೊ. ಶಾಲೆಟ್ ಲುವಿಸ್, ಕೃಷ್ಣ ಪ್ರಸಾದ್ ಶೆಟ್ಟಿ, ಗಣೇಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ : ಸೇವಾಭಾರತಿ - ಸೇವಾಧಾಮ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಹೈಟೆಕ್‌ ಮೆಡಿಕೇರ್ ಆಸ್ಪತ್ರೆ, ಅಂಬಲಪಾಡಿ ಉಡುಪಿ, ರೋಟರಿ ಕ್ಲಬ್ ಕಾಪು, ಅಮ್ಮ ರಿಲೀಜಿಯಸ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.), ಕಾಪು ಮತ್ತು ದಿವ್ಯಾಂಗ ರಕ್ಷಣಾ ಸಮಿತಿ, ಕೊಡವೂರು ಇವುಗಳ ಸಹಯೋಗದಲ್ಲಿ ಅಕ್ಟೋಬರ್ 20 ರಂದು ಹೈಟೆಕ್ ಮೆಡಿಕೇರ್ ಆಸ್ಪತ್ರೆ ಅಂಬಲಪಾಡಿ ಉಡುಪಿ ಇಲ್ಲಿ 16ನೇ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ಮತ್ತು 10 ಗಾಲಿಕುರ್ಚಿಗಳ ವಿತರಣಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಗರಸಭಾ ಸದಸ್ಯರು, ಕೊಡವೂರು ಮತ್ತು ಸೇವಾಧಾಮದ ನಿರ್ದೇಶಕರಾದ ಕೆ. ವಿಜಯ ಕೊಡವೂರು ವಹಿಸಿದ್ದರು. ಈ ಸಂದರ್ಭ ಸಿಎ ಗುಜ್ಜಾಡಿ ಪ್ರಭಾಕರ್‌ ನರಸಿಂಹ ನಾಯಕ್‌, ವೈ. ಸುಧೀರ್ ಕುಮಾರ್, ಗುರುಪ್ರಕಾಶ್‌ ಶೆಟ್ಟಿ, ಪ್ರಾಣೇಶ್, ವಿಷ್ಣು ಪ್ರಸಾದ್ ತೆಂಕಿಲ್ಲಾಯ, ಸಂಪತ್‌ ಕುಮಾರ್‌ ರಾವ್, ರೊ. ವಿದ್ಯಾಧರ ಪುರಾಣಿಕ್, ಹರೀಶ್‌ ಕೊಪ್ಪಲ್ ತೋಟ, ಸ್ವರ್ಣ ಗೌರಿ, ಸಂತೋಷ್ ಸುವರ್ಣ, ಮನು ಆರ್ ಮತ್ತಿತರರು ಉಪಸ್ಥಿತರಿದ್ದರು.