ಕಾಪು : ಇಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ)
ವಿನಯ ಕುಮಾರ್ ಸೊರಕೆ ಉಪಸ್ಥಿತಿಯಲ್ಲಿ
ದೀಪಾವಳಿ ಹಬ್ಬದ ಪ್ರಯುಕ್ತ ತುಡರ ಪರ್ಬದ ಗಮ್ಮತ್ 2022 ಇದರ ಅಂಗವಾಗಿ ಸೋಮವಾರ
ರಾಜೀವ್ ಭವನ, ಕಾಪು ಇಲ್ಲಿ ವಿವಿಧ ಸಮುದಾಯಗಳ ಅನಾಥರಿಗೆ,ನಿರಾಶ್ರಿತರಿಗೆ ಉಡುಪುಗಳನ್ನು, ಸಿಹಿ ತಿಂಡಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಮೋಹನ್ ನಂಬಿಯಾರ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲರೂ ಒಂದೇ. ಎಲ್ಲರ ಮನಸ್ಸಿನಲ್ಲಿ ನಾವೆಲ್ಲ ಒಂದೇ ಎಂಬ ಸಂದೇಶ ಹುಟ್ಟಿ ಎಲ್ಲಾ ಕಡೆ ಪಸರಿಸಬೇಕಿದೆ ಎಂದರು.
ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಮಾತನಾಡಿ, ದೀಪಾವಳಿ ಬೆಳಕಿನ ಹಬ್ಬ. ಪ್ರತಿ ಹಬ್ಬವು ಉತ್ತಮ ಸಂದೇಶ ನೀಡುತ್ತದೆ. ಕಾಂಗ್ರೆಸ್ ಪಕ್ಷವು ಎಲ್ಲಾ ಧರ್ಮಿಯರನ್ನು ಸಮಾನವಾಗಿ ಕಾಣುವ ಪಕ್ಷವಾಗಿದೆ. ಕಾಂಗ್ರೆಸ್ ಕಚೇರಿಯು ಪವಿತ್ರವಾದ ಸ್ಥಳ. ಇಲ್ಲಿ ಎಲ್ಲರಿಗೂ ಸಮಾನವಾದ ಸ್ಥಾನ ನೀಡುತ್ತಿದೆ. ದೀಪಾವಳಿ ಕತ್ತಲನ್ನು ಕಳೆದು ಬೆಳಕ ನೀಡುವ ಹಬ್ಬ. ದ್ವೇಷ ಕಡಿಮೆಯಾಗಿ ಪ್ರೀತಿ ಹೆಚ್ಚಾಗಲಿ ಎಂದು ಹಾರೈಸಿದರು.
ಸನ್ಮಾನ : ಮಲ್ಲಾರು ಆಶ್ರಮದ ಮಹಮ್ಮದ್ ಶಫಿ ಮದನಿ, ಕಟಪಾಡಿ ಕಾರುಣ್ಯ ಆಶ್ರಮದ ಕುಮಾರ್ ಪಾಂಗಾಳ ಆಸರೆ ಹಿರಿಯರ ವಸತಿ ಧಾಮದ ಬೆನ್ವಿನ್ ಪಾಂಗಾಳ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನವೀನ್ ಚಂದ್ರ ಸುವರ್ಣ,
ದೀಪಕ್ ಎರ್ಮಾಳ್, ಶಾಂತಲತ ಶೆಟ್ಟಿ, ಶೇಖರ್ ಹೆಜ್ಮಾಡಿ, ನವೀನ್ ಶೆಟ್ಟಿ, ಹರೀಶ್ ನಾಯಕ್,
ಗಣೇಶ್ ಕೋಟ್ಯಾನ್,ರಮೀಝ್ ಹುಸೇನ್,
ಸಾದಿಕ್, ಸುಚರಿತ, ಜ್ಯೋತಿ ಮೆನನ್, ಶರ್ಫುದ್ದೀನ್, ಅಬ್ದುಲ್ ರೆಹಮಾನ್, ಲಕ್ಷ್ಮೀಶ್ ತಂತ್ರಿ, ಮಧ್ವರಾಜ್, ಆಶಾ ಕಟಪಾಡಿ, ಅಶ್ವಿನಿ ಬಂಗೇರ, ಸುಧೀರ್ ಕರ್ಕೇರ, ಯಶವಂತ್ ಪಲಿಮಾರು, ದೀಪ್ತಿ ಮನೋಜ್, ಉಸ್ಮಾನ್ ಕೊಪ್ಪಲಂಗಡಿ ಮತ್ತಿತರರು ಉಪಸ್ಥಿತರಿದ್ದರು.
ದೀಪಕ್ ಎರ್ಮಾಳು ಸ್ವಾಗತಿಸಿದರು.
ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು.