ಕಾಪು : ಇಲ್ಲಿನ ಮಹತೋಭಾರ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದಲ್ಲಿ ಸಾರ್ವಜನಿಕ ಗೋಪೂಜೆ ಮತ್ತು ವಾಹನ ಪೂಜೆಯು ಬುಧವಾರ ನೆರವೇರಿತು.
ದೇವಳದ ಪ್ರಧಾನ ತಂತ್ರಿ ಶ್ರೀಶ ತಂತ್ರಿ ನೇತೃತ್ವದಲ್ಲಿ ಗೋ ಪೂಜೆ ನೆರವೇರಿತು.
ಈ ಸಂಧರ್ಭ ಬೀಡು ಮನೆತನದ ಅನಿಲ್ ಬಳ್ಳಾಲ್, ಕಾರ್ಯನಿರ್ವಹಣಾಧಿಕಾರಿ ಸುಧೀರ್ ಕುಮಾರ್ ಶೆಟ್ಟಿ, ಆಡಳಿತಾಧಿಕಾರಿ ಗಣೇಶ್ ರಾವ್, ಲೀಲಾಧರ ಶೆಟ್ಟಿ ಕಾಪು, ನಡಿಕೆರೆ ರತ್ನಾಕರ್ ಶೆಟ್ಟಿ,
ಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯ, ಯೋಗೀಶ್ ಪೂಜಾರಿ, ದಿವಾಕರ್, ಲಕ್ಷ್ಮೀಶ್, ಸಿಬಂದಿ ವರ್ಗ ಉಪಸ್ಥಿತರಿದ್ದರು.