ಪಲಿಮಾರು : ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು ನೇತೃತ್ವದಲ್ಲಿ ಸಾಮೂಹಿಕ ಗೋಪೂಜಾ ಕಾರ್ಯಕ್ರಮ
Posted On:
26-10-2022 08:46PM
ಪಲಿಮಾರು : ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು, ಪಲಿಮಾರು ಇದರ ನೇತೃತ್ವದಲ್ಲಿ ದಿನಾಂಕ ಬುಧವಾರದಂದು ಭಾರತಮಾತೆಗೆ ಪುಷ್ಪಾರ್ಚನೆಯನ್ನೂ ಸಲ್ಲಿಸಿ, ಸಾಮೂಹಿಕ ಗೋಪೂಜಾ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಕಿಂಚಿತ್ತು ಸೇವೆ ಮಾಡುವ ಉದ್ದೇಶದಿಂದ, ದೇಣಿಗೆಯನ್ನು ಸಂಗ್ರಹಿಸಲು ಕಾಣಿಕೆ ಡಬ್ಬಿಯನ್ನು ನೀಡಲಾಯಿತು.
ಪಲಿಮಾರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗಾಯತ್ರಿ ಡಿ ಪ್ರಭು ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗೋರಕ್ಷಕ ಪ್ರಮುಖರಾದ ಸಂದೇಶ್ ಶೆಟ್ಟಿ ಪಾದೆಬೆಟ್ಟು, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಲೋಕೇಶ್ ಪಲಿಮಾರು, ಭಗವತಿ ಗ್ರೂಪ್ ಇದರ ಪ್ರಮುಖರಾದ ಯುವರಾಜ್ ಕುಲಾಲ್ ಪಡುಬಿದ್ರಿ, ಹಾಗೂ ಶ್ರೀದೇವಿ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರು, ಹಾಗೂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.