ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ಹಾಗೂ ರೋಟರಿ ಸಮುದಾಯದಳ ಪಡುಬಿದ್ರಿ ಇದರ ವತಿಯಿಂದ ಬುಧವಾರ ಓಂಕಾರ್ ಕಲಾಸಂಗಮದಲ್ಲಿ ದೀಪಾವಳಿ ಸಂಭ್ರಮಾಚರಣೆ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋ.ಗೀತಾ ಅರುಣ್ ವಹಿಸಿದ್ದರು.
ಪೂರ್ವ ಸಹಾಯಕ ಗವರ್ನರ್ ರೋಟರಿ ವಲಯ 5 ರ ರೋ. ಮಾಧವ ಸುವರ್ಣ, ವಿಶ್ವಕರ್ಮ ಸಹಕಾರ ಸೊಸೈಟಿಯ ಉದ್ಯೋಗಿ ಸುನಂದಾ ಗಣೇಶ್ ,ರೋಟರಿ ಕ್ಲಬ್ ಪಡುಬಿದ್ರಿಯ ಪೂರ್ವ ಅಧ್ಯಕ್ಷ ರೋ. ರಿಯಾಜ್ ಮುದರಂಗಡಿ , ಸಮುದಾಯ ದಳದ ಕಾರ್ಯದರ್ಶಿ ತನಿಷ ಜಿ ಕುಕ್ಯಾನ್, ರೋಟರಿ ಕಾರ್ಯದರ್ಶಿ ರೋ. ಜ್ಯೋತಿ ಮೆನನ್ ,ರೋ. ಪುಷ್ಪಲತಾ ಗಂಗಾಧರ್ , ರೋಟರಿ ಸಮುದಾಯದಳದ ಸದಸ್ಯರಾದ ಕುಮಾರಿ ಚೈತ್ರ, ಅದ್ವಿತ್ ಕುಮಾರ್,ಸಿಂಧುಜಾ ಮತ್ತು ರೋಟರಿ ಕ್ಲಬ್ ಪಡುಬಿದ್ರಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ರೋ. ಗೀತಾ ಅರುಣ್ ಸ್ಟಾಗತಿಸಿದರು. ರೋ. ಸುಧಾಕರ್ ಕೆ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.