ಮಟ್ಟಾರು : ದಶಮ ವರ್ಷದ ಸಾರ್ವಜನಿಕ ಗೋಪೂಜಾ ಉತ್ಸವ - ಗೋಪೂಜೆ ಮತ್ತು ವಾಹನ ಪೂಜೆ
Posted On:
27-10-2022 02:05PM
ಕಾಪು : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ದಶಮ ವರ್ಷದ ಸಾರ್ವಜನಿಕ ಗೋಪೂಜಾ ಉತ್ಸವದ ಪ್ರಯುಕ್ತ ಬುಧವಾರ ಗೋಪೂಜೆ ಮತ್ತು ವಾಹನ ಪೂಜೆ ನಡೆಯಿತು.
ಶಂಕರಪುರ ಶ್ರೀ ದ್ವಾರಕಾಮಯಿ ಸಾಯಿಬಾಬಾ ಮಂದಿರದ ಪೂಜ್ಯ ಶ್ರೀ ಸಾಯಿ ಈಶ್ವರ್ ಗುರೂಜಿ ಆಶೀರ್ವಚನ ನೀಡಿದರು.
ವಿಶ್ವ ಹಿಂದೂ ಪರಿಷದ್ ಮಟ್ಟಾರು ಘಟಕ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ,ಮಾಣಿಬೆಟ್ಟು ಶ್ರೀ ವಿಷ್ಣುಮೂರ್ತಿ ಉಪಾಧ್ಯಾಯ,ವಿಶ್ವ ಹಿಂದೂ ಪರಿಷದ್ ಕಾಪು ಪ್ರಖಂಡ ಅಧ್ಯಕ್ಷ ಜಯಪ್ರಕಾಶ್ ಪ್ರಭು,ಶಿರ್ವ ವಲಯ ಕಾರ್ಯದರ್ಶಿ ಪ್ರಕಾಶ್ ಕೋಟ್ಯಾನ್,ಮಟ್ಟಾರು ಘಟಕ ಗೋರಕ್ಷಾ ಪ್ರಮುಖ್ ಶಿವರಾಜ ಆಚಾರ್ಯ,ದುರ್ಗಾವಾಹಿನಿ ಸಂಚಾಲಕಿ ದೀಕ್ಷಾ ಪ್ರಭು,ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವಾರಿಜಾ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ರಂಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.ಸಭೆಯ ನಂತರ ಮಾಣಿಬೆಟ್ಟು ಶ್ರೀ ವಿಷ್ಣುಮೂರ್ತಿ ಉಪಾಧ್ಯಾಯರ ನೇತೃತ್ವದಲ್ಲಿ ಗೋಪೂಜೆ ಮತ್ತು ವಾಹನ ಪೂಜೆ ನಡೆಯಿತು. ಕಾರ್ಯಕ್ರಮದ ನಂತರ
ಶ್ರೀ ದ್ವಾರಕಾಮಯಿ ಮಠ ಶಂಕರಪುರ ಇವರ ವತಿಯಿಂದ ಶ್ರೀ ಸೌಭಾಗ್ಯ ಕಾರ್ಯಕ್ರಮದ ಪ್ರಯುಕ್ತ ಆಯ್ದ 21 ಹೆಣ್ಣು ಮಕ್ಕಳಿಗೆ ಚಿನ್ನದ ಮೂಗುತಿ ಧಾರಣೆ ನಡೆಯಿತು.