ಕಾಪು : ಹಿಂದು ಜಾಗರಣ ವೇದಿಕೆ ಪೈಯ್ಯಾರು ಘಟಕದ ವತಿಯಿಂದ ಸಾರ್ವಜನಿಕ ಗೋಪೂಜೆ
Posted On:
27-10-2022 06:00PM
ಕಾಪು : ಹಿಂದು ಜಾಗರಣ ವೇದಿಕೆ ಕಾಪು ತಾಲೂಕು ಪೈಯ್ಯಾರು ಘಟಕದ ವತಿಯಿಂದ ದ್ವಿತೀಯ ವರ್ಷದ ಸಾರ್ವಜನಿಕ ಗೋಪೂಜೆ ಹಾಗೂ ವಾಹನ ಪೂಜೆ ಕಾರ್ಯಕ್ರಮ ಬುಧವಾರದಂದು ವಿಜೃಂಭಣೆಯಿಂದ ಜರುಗಿತು.
ಮುಖ್ಯ ಅತಿಥಿಗಳಾಗಿ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕರಾದ ಉಮೇಶ್ ಸೂಡ, ನೀತಾ ಪ್ರಭು, ಹಿಂದು ಜಾಗರಣ ವೇದಿಕೆ ಕಾಪು ತಾಲೂಕು ಸಂಯೋಜಕರಾದ ಗುರುಪ್ರಸಾದ್ ಸೂಡ, ಬೆಳಪು ಗ್ರಾಮದ ಸಾಮಾಜಿಕ ಮುಖಂಡ ಕೆ.ಕೊರಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ನೀತಾ ಪ್ರಭು ಗೋವಿನ ಮಹತ್ವ ಹಾಗೂ ಹಿರಿಯರು ಗೋವನ್ನು ಪೂಜಿಸಿಕೊಂಡು ಬಂದ ರೀತಿ ಹಾಗೂ ಗೋರಕ್ಷಣೆ ಇಡೀ ಹಿಂದು ಸಮಾಜದ ಕರ್ತವ್ಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ಉದ್ಯಮಿ ಗಣೇಶ್ ಶೆಟ್ಟಿ ಪೈಯ್ಯಾರು ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಹಿಂದು ಜಾಗರಣ ವೇದಿಕೆ ಕಾಪು ತಾಲೂಕು ಸಹಸಂಯೋಜಕರಾದ ಲೋಕೇಶ್ ಪಲಿಮಾರು, ಕಾಪು ತಾಲೂಕು ಸಂಪರ್ಕ ಪ್ರಮುಖ್ ರಾಜೇಶ್ ಪೈಯ್ಯಾರು, ಕಾಪು ತಾಲೂಕು ಯುವವಾಹಿನಿ ಸಂಯೋಜಕ ರಂಜಿತ್ ಬೆಳಪು ಹಾಗೂ ಪೈಯ್ಯಾರು ಭಾಗದ ಸಾಮಾಜಿಕ ಮುಖಂಡ ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.