ಕಾಪು : ಮರದ ದಿಮ್ಮಿಯಿದ್ದ ಲಾರಿಯ ಟೈಯರ್ ಸ್ಫೋಟ ; ಉರಿದ ದಿಮ್ಮಿ ; ತಪ್ಪಿದ ಭಾರೀ ಅನಾಹುತ
Posted On:
28-10-2022 01:18PM
ಕಾಪು : ತೀರ್ಥಹಳ್ಳಿಯಿಂದ ಮಂಗಳೂರು ಕಡೆ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿಯೊಂದರ ಟೈರ್ ಸ್ಫೋಟಗೊಂಡು ಮರದ ದಿಮ್ಮಿ ಸಮೇತ ಲಾರಿ ಹೊತ್ತಿ ಉರಿದ ಘಟನೆ ಗುರುವಾರ ತಡ ರಾತ್ರಿ ಕಾಪು ದಂಡ ತೀರ್ಥ ಮಠದ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ನಡೆದಿದೆ.
ಘಟನೆಯಿಂದಾಗಿ ಲಾರಿಯ ಹಿಂಭಾಗ ಟಯರ್ ಸಂಪೂರ್ಣ ಸುಟ್ಟು ಕರಕಲಾಗಿದ್ದು ಮರದ ದಿಮ್ಮಿಗಳು ಕೂಡ ಬೆಂಕಿಗೆ ಆಹುತಿಯಾಗಿದೆ.
ಕೂಡಲೇ ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.