ಕಾಪು : ರಾಮ ನಾಮ ಸಂಕೀರ್ತನಾ ಪಾದಯಾತ್ರೆ ಯು ಅಕ್ಟೋಬರ್ 30, ಆದಿತ್ಯವಾರದಂದು ಕಾಪು ಶ್ರೀ ವೆಂಕಟರಮಣ ದೇವಳದಿಂದ ಬೆಳಿಗ್ಗೆ ಗಂಟೆ 5:30 ಕ್ಕೆ ಪ್ರಾರಂಭಗೊಂಡು, ಹಳೇ ಮಾರಿಯಮ್ಮ ದೇವಳ ಭೇಟಿಯಾಗಿ, ಪಡುಬಿದ್ರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳ, ಹೆಜಮಾಡಿ ಶ್ರೀ ಲಕ್ಷ್ಮೀ ನಾರಾಯಣ ದೇವಳ ಭೇಟಿಯಾಗಿ ತದನಂತರ ಹೆಜಮಾಡಿ ಟೋಲ್ ಗೇಟ್ ನಿಂದ ಹೊರೆಕಾಣಿಕೆ ಸಹಿತ ಮೂಲ್ಕಿ ಶ್ರೀ ವೆಂಕಟರಮಣ ದೇವಳ ತಲುಪಿ ರಾಮ ನಾಮ ಸಂಕೀರ್ತನ ಪಾದ ಯಾತ್ರೆ ಸಂಪನ್ನಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು ಶ್ರೀ ವೆಂಕಟರಮಣ ದೇವಳದಲ್ಲಿ ಪ್ರಾತಃ ಜಾಗರ ಪೂಜೆ ನಂತರ ಸಾಮೂಹಿಕ ಪ್ರಾರ್ಥನೆ, ಉಪಹಾರ, ಸಂಕೀರ್ತನ ಯಾತ್ರೆ ಆರಂಭ. ಹಳೇ ಮಾರಿಯಮ್ಮ ದೇವಳ ಭೇಟಿ, ಪಡುಬಿದ್ರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಳ ಭೇಟಿಯಾಗಿ ವಿಶ್ರಾಂತಿ, ಉಪಹಾರ, ಹೆಜಮಾಡಿ ಶ್ರೀ ಲಕ್ಷ್ಮೀ ನಾರಾಯಣ ದೇವಳ ಭೇಟಿ , ವಿಶ್ರಾಂತಿ ನಂತರ ಮೂಲ್ಕಿ ಶ್ರೀ ವೆಂಕಟರಮಣ ದೇವಳ ತಲುಪಲಿದೆ.