ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ನೂತನ ಗೃಹ ರಕ್ಷಕ ದಳ ಪದಾಧಿಕಾರಿಗಳ ಕಚೇರಿ ಉದ್ಘಾಟನೆ

Posted On: 28-10-2022 11:33PM

ಕಾಪು : ಗೃಹ ರಕ್ಷಕ ದಳ ಕಾಪು ಘಟಕದ ಪದಾಧಿಕಾರಿಗಳ ನೂತನ ಕಚೇರಿಯನ್ನು ಉಡುಪಿ ಜಿಲ್ಲಾ ಸಮಾದೇಷ್ಟ ಡಾ. ಪ್ರಶಾಂತ ಶೆಟ್ಟಿ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಗೃಹ ರಕ್ಷಕ ದಳದ ಕಚೇರಿಯು ಈ ಹಿಂದೆ ಇದ್ದ ಕಚೇರಿಯಿಂದ ನೂತನ ಕಚೇರಿಗೆ ಸ್ಥಳಾಂತರವಾಗಿದೆ. ಇದಕ್ಕೆ ಸಹಕರಿಸಿದ ಶಾಸಕರು, ಪಂಚಾಯತ್ ಹಾಗೂ ಪುರಸಭೆಯ ಸರ್ವರಿಗೂ ಕೃತಜ್ಞತೆಗಳನ್ನು ಹೇಳಿದರು.

ಉಡುಪಿ ಜಿಲ್ಲಾ ಡೆಪ್ಯುಟಿ ಕಮಾಂಡೆಂಟ್ ರಮೇಶ್ ಮಾತನಾಡಿ ನಾಲ್ಕು ವರ್ಷಗಳ ಹಿಂದೆ ಕಾಪುವಿನಲ್ಲಿ ಗೃಹರಕ್ಷಕ ದಳದ ಕಚೇರಿ ಉದ್ಘಾಟನೆಯಾಗಿತ್ತು. ಇದೀಗ ನೂತನ ಕಚೇರಿಯ ಸದುಪಯೋಗ ಎಲ್ಲಾ ಗೃಹರಕ್ಷಕರು ಪಡೆಯುವಂತಾಗಲಿ ಎಂದರು.

ಈ ಸಂದರ್ಭ ಕಾಪು ಘಟಕಾಧಿಕಾರಿ ಲಕ್ಷೀನಾರಾಯಣ ರಾವ್, ಗೃಹರಕ್ಷಕ ದಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.