ಹೆಜಮಾಡಿ :ಇಲ್ಲಿನ 181 ಕೋಟಿ ರೂಗಳ ಮೊತ್ತದಲ್ಲಿ 70 ಎಕ್ರೆ ಪ್ರದೇಶದಲ್ಲಿ ಬಂದರು ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಬಂದರು ಸಮಿತಿ, ಸ್ಥಳೀಯರೊಂದಿಗೆ ಶಾಸಕ ಲಾಲಾಜಿ ಆರ್ ಮೆಂಡನ್ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಿಗೆ ಇರುವ ಗೊಂದಲವನ್ನು ಶಾಸಕರು ಬಗೆಹರಿಸಿದರು ಹಾಗೂ ಕಾಮಗಾರಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಗಣೇಶ್, ಸಹಾಯಕ ನಿರ್ದೇಶಕರು ದಿವಾಕರ್ ಖಾರ್ವಿ, ಬಂದರು ಹಾಗೂ ಮೀನುಗಾರಿಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉದಯಕುಮಾರ್, ಸಹಾಯಕ ಇಂಜಿನಿಯರ್ ಜಯರಾಜ್, ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪಾಂಡುರಂಗ ಕರ್ಕೇರ, ಬಂದರು ಸಮಿತಿ ಅಧ್ಯಕ್ಷ ಸದಾಶಿವ ಕೋಟ್ಯಾನ್, ಕಾರ್ಯದರ್ಶಿ ವಿಜಯ ಎಸ್ ಬಂಗೇರ, ಪ್ರಮುಖರಾದ ವಿನೋದ್ ಕೋಟ್ಯಾನ್, ಹರಿಶ್ಚಂದ್ರ ಮೆಂಡನ್, ಎಕನಾಥ ಕರ್ಕೇರ, ರವಿ ಕುಂದರ್, ಶರಣ್ ಹೆಜಮಾಡಿ, ಲಲಿತ್ ಕುಮಾರ್, ಅರುಣ್ ಕುಮಾರ್, ರಘುವೀರ್ ಸುವರ್ಣ, ಜನಾರ್ಧನ ಕೋಟ್ಯಾನ್, ರೋಷನ್ ಕುಂದರ್, ಶೈಲೇಶ್ ಕುಂದರ್, ಭರತ್ ಕಾಂಚನ್, ಶೇಖರ್ ಕೋಟ್ಯಾನ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.