ಉಡುಪಿ : ಚಾಣಕ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಹೆಬ್ರಿ ಇದರ ನೇತೃತ್ವದಲ್ಲಿ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿರುವ ವಾಯ್ಸ್ ಆಫ್ ಚಾಣಕ್ಯ 2022 ಉಡುಪಿ ಜಿಲ್ಲಾ ಮಟ್ಟದ ಟ್ರ್ಯಾಕ್ ಸಂಗೀತ ಸ್ಪರ್ಧೆ ಆಯ್ಕೆ ಪ್ರಕ್ರಿಯೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಉಡುಪಿ ಸೃಷ್ಟಿ ಸಂಗೀತ ತರಬೇತಿ ಕೇಂದ್ರದಲ್ಲಿ ರವಿವಾರ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಸೃಷ್ಟಿ ಸಂಗೀತ ತರಬೇತಿ ಕೇಂದ್ರದ ಆಡಳಿತ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ವಹಿಸಿದ್ದರು.
ಸಮಾರಂಭದಲ್ಲಿ ಚಿತ್ರಕಲಾ ಶಿಕ್ಷಕ ರಮೇಶ್ ಕಿದಿಯೂರು, ತೀರ್ಪುಗಾರರಾದ ಸಂಗೀತ ಶಿಕ್ಷಕಿ ಸ್ವಾತಿ ಭಟ್ ಉಡುಪಿ, ಜಯಶ್ರೀ ಕೋಟ್ಯಾನ್ ಕಟಪಾಡಿ, ಸೃಷ್ಟಿ ಫೌಂಡೇಶನ್ ನ ಅಧ್ಯಕ್ಷೆ ಪ್ರೀತಿ ಪಿ.ಸುವರ್ಣ, ಎಸ್ ಪಿ ಮ್ಯೂಸಿಕ್ ನ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.