ಕಟಪಾಡಿ : ರಾಷ್ಟ್ರ ಮಟ್ಟದ ಕ್ರೀಡೆಗಳಿಂದ ಮಕ್ಕಳ ಭವಿಷ್ಯ ಉಜ್ವಲಗೊಳ್ಳುವುದು. ಕರಾಟೆಯಂತಹ ಕ್ರೀಡೆಯಲ್ಲಿ ಭಾಗವಹಿಸುವುದರ ಮೂಲಕ ಮಕ್ಕಳ ಮಾನಸಿಕ ಬೆಳವಣಿಗೆಗೊಳ್ಳುವ ಜೊತೆಗೆ ಶಾಲಾ ಕಲಿಕೆಗೆ ಸಹಾಯವಾಗುವುದು. ಇದೇ ರೀತಿಯಲ್ಲಿ ಹಳ್ಳಿ ಹಳ್ಳಿ ಗಳಿಂದ ಕರಾಟೆ ಪಟುಗಳು ಹೊರಹೊಮ್ಮುವುದರಿಂದ ಮುಂದಿನ ದಿನಗಳಲ್ಲಿ ಕರಾಟೆ ಮೂಲಕ ನಮ್ಮ ರಾಜ್ಯ ವಿಶ್ವದಲ್ಲೇ ಹೆಸರು ಗಳಿಸುವುದರಲ್ಲಿ ಸಂಶಯವಿಲ್ಲ. ರಾಷ್ಟ್ರ ಮಟ್ಟದ ಕ್ರೀಡೆಗಳಿಂದ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿ
ಎಂದು ಯಶ್ ಪಾಲ್ ಸುವರ್ಣ ಹೇಳಿದರು.
ಅವರು ಉಡುಪಿ ಜಿಲ್ಲೆಯ ಕಟಪಾಡಿ ಸುಭಾಸ್ ನಗರದಲ್ಲಿ ಕೆನ್-ಈ-ಮಾಬುನಿ ಶಿಟೋ-ರಿಯೋ ಕರಾಟೆ ಸ್ಕೂಲ್ ಆಫ್ ಇಂಡಿಯಾ ಉಡುಪಿ,ಸಂಸ್ಥೆಯ ವತಿಯಿಂದ ಆದಿತ್ಯವಾರ ಕಟಪಾಡಿ ಸುಭಾಷ್ ನಗರದ ಥಂಡರ್ಸ್ ಗ್ರಾಂಡ್ ಬೇ ಸಭಾಂಗಣದಲ್ಲಿ ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಹಕಾರಿ ಯಾಗಲಿ ಎಂಬ ಉದ್ದೇಶದಿಂದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಕೂಟ "ಕೊಂಪಿಟ್ -3.0," ಉದ್ಘಾಟಸಿ ಮಾತನಾಡಿದರು.
ಈ ಸಂದರ್ಭ ಸುಮಾರು ಸಾವಿರದ ಐನೂರು ಕರಾಟೆ ವಿದ್ಯಾರ್ಥಿಗಳು ಭಾಗವಹಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯತೀಶ್ , ಸಂಸ್ಥೆಯ ಗೌರವಾಧ್ಯಕ್ಷ ಯಶ್ ಪಾಲ್ ಎ.ಸುವರ್ಣ, ನವೀನ್ ಅಮೀನ್ ಶಂಕರಪುರ, ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಕಾರ್ಯದರ್ಶಿ ರವಿ ಕೋಟ್ಯಾನ್, ಗೌರವ ಸಲಹೆಗಾರ ರವಿ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.