ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು ವೆಂಕಟರಮಣ ದೇವಳದಲ್ಲಿ ಮೃಗಬೇಟೆ ಉತ್ಸವ

Posted On: 07-11-2022 08:37PM

ಕಾಪು : ಇಲ್ಲಿನ ಶ್ರೀ ವೆಂಕಟರಮಣ ದೇವಳದಲ್ಲಿ ಮೃಗಬೇಟೆ ಉತ್ಸವ ಇಂದು ಜರಗಿತು.

ಈ ಸಂದರ್ಭ ಮಾತನಾಡಿದ ವೇದಮೂರ್ತಿ ಕಮಲಾಕ್ಷ ಭಟ್ ಶಯನಿ ಏಕಾದಶಿಯಂದು ಮಲಗುವ ಶ್ರೀ ಹರಿ ಉತ್ಥಾನ ದ್ವಾದಶಿಯಂದು ಎಚ್ಚರಗೊಳ್ಳುತ್ತಾನೆಂದು ನಂಬಿಕೆ. ನಾಲ್ಕು ತಿಂಗಳ ಶಯನಾವಸ್ಥೆ ಮುಗಿದು ದೇವರು ಉತ್ಸವಕ್ಕೆ ಹೊರಡುವಾಗ ಮೃಗಬೇಟೆ ಮಾಡುವ ಸಂಪ್ರದಾಯ. ಮೃಗ ಎಂದರೆ ದುಷ್ಟ ನಾಶ. ಅರ್ಥಾತ್ ನಮ್ಮಲ್ಲಿ ತುಂಬಿರುವ ಷಡ್ವೈರಿಗಳ ಸಂಹಾರ. ದೇಗುಲದಲ್ಲಿ ಹುಲಿಯ ವೇಷದಲ್ಲಿ ಒಬ್ಬರು ಅಭಿನಯಿಸಿ ಅದನ್ನು ಅಟ್ಟಿಸಿಕೊಂಡು ಜನರು ಸಂಹರಿಸುವ ಅಭಿನಯವೇ ಈ ಉತ್ಸವ ಆಚರಣೆ ನಡೆಯುತ್ತದೆ ‌ಎಂದರು.