ಎರ್ಮಾಳು : ರಾಷ್ಟ್ರೀಯ ಹೆದ್ದಾರಿ 66 ಶ್ರೀ ಜನಾರ್ಧನ ದೇವಾಲಯದ ಬಳಿ ನೈಮಾಡಿ ಸುಂದರ ಕಾಂತರ ಶೆಟ್ಟಿ, ಮಕ್ಕಳಿಂದ ನಿರ್ಮಾಣಗೊಂಡ ಜನಾರ್ಧನ ರಿಕ್ಷಾ ನಿಲ್ದಾಣವನ್ನು ಜನಾರ್ಧನ ದೇವಾಲಯದ ಆಡಳಿತ ಮೊಕ್ತೇಸರ ಅಶೋಕ ರಾಜ್ ರವರು ಶನಿವಾರ ಬೆಳಗ್ಗೆ ಲೋಕಾರ್ಪಣೆಗೈದರು.
ಈ ಸಂದರ್ಭ ಅವರು ಮಾತನಾಡಿ, ರಿಕ್ಷಾ ಚಾಲಕರು ಸಮಾಜದ ಕಣ್ಣಿದ್ದಂತೆ ರಿಕ್ಷಾ ಇಲ್ಲದ ದಿನಗಳನ್ನು ನಾವು ನೆನಪಿಸುವಂತಿಲ್ಲ ರಿಕ್ಷಾ ಚಾಲಕರು ಜನಪರ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಉತ್ತಮ ಸೇವೆ ನೀಡಬೇಕೆಂದರು.
ಶ್ರೀ ಲಕ್ಷ್ಮಿ ಜನಾರ್ಧನ ದೇಗುಲದ ಪ್ರಧಾನ ಅರ್ಚಕ ವೇದಮೂರ್ತಿ ಕೃಷ್ಣಮೂರ್ತಿ ಭಟ್ ರವರು ಪೂಜಾ ವಿಧಿ ವಿಧಾನ ಪೂರೈಸಿದರು.
ಈ ಸಂದರ್ಭ ವೇದಿಕೆಯಲ್ಲಿ ದಾನಿಗಳಾದ ನೈಮಾಡಿ ನಾರಾಯಣ್ ಶೆಟ್ಟಿ, ವಸಂತ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಕೆ ಎಲ್ ಕುಂಡಂತಾಯ, ಸುದರ್ಶನ್ ವೈ ಎಸ್., ನವಯುಗ ಕಂಪನಿಯ ಶೈಲೇಶ ಶೆಟ್ಟಿ, ಉದಯ್ ಕೆ ಶೆಟ್ಟಿ, ಜಗಜೀವನ್ ಚೌಟ, ಕಿಶೋರ್ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಕುಂತಲಾ, ವಿಶುಕುಮಾರ್, ರೋಹಿತ್ ಆಚಾರ್ಯ, ಗಣೇಶ್ ಶೆಟ್ಟಿ, ಶಶಿಧರ್ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ಶಶಿಕಲಾ, ಸಂಘದ ಅಧ್ಯಕ್ಷ ರಾಮ ಪಿ ಸಾಲಿಯನ್, ಗೌರವಾಧ್ಯಕ್ಷ ಸಂತೋಷ್ ಜೆ ಶೆಟ್ಟಿ ಬರ್ಪಾಣಿ, ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ಜಯ ಮೂಲ್ಯ, ಉಪಸ್ಥಿತರಿದ್ದರು.
ಗಣೇಶ್ ಅದಮಾರು ಸ್ವಾಗತಿಸಿ ನಿರೂಪಿಸಿ ವಂದಿಸಿದರು.