ಕಾಪು : ಅಕ್ರಮ, ಅವೈಜ್ಞಾನಿಕ, ಕಾನೂನು ಬಾಹಿರ ವಾಗಿ ಕಾರ್ಯಾಚರಿಸುತ್ತಿರುವ ಸುಲಿಗೆ ಕೇಂದ್ರವು ರದ್ದಾಗುವವರೆಗೆ ವಿರಮಿಸೆವು ಈ ನಿಟ್ಟಿನಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರ ಗೊಳಿಸಲಾಗುವುದೆಂದು ವಿನಯ್ ಕುಮಾರ್ ಸೊರಕೆ ಅವರು ಕಾಪುವಿನಲ್ಲಿ ನಡೆದ ಧರಣಿ ಪ್ರತಿಭಟನೆಯಲ್ಲಿ ಗುಡುಗಿದರು.
ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಹಾಗೂ ಇತರ ಸಮಾನ ಮನಸ್ಕ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂದು ಕಾಪು ಪೇಟೆಯಲ್ಲಿ ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸುವ ನಿಟ್ಟಿನಲ್ಲಿ ಟೋಲ್ ವಿರೋಧಿ ಹೋರಾಟ ಸಮಿತಿಯ ನಿರ್ಣಯದಂತೆ ಉಭಯ ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಧರಣಿ ಕಾರ್ಯಕ್ರಮವು ಪ್ರಥಮವಾಗಿ ಕಾಪುವಿನಲ್ಲಿ ನಡೆಯಿತು.
ಏಳು ವರ್ಷಗಳ ಹಿಂದೆ ಸುರತ್ಕಲ್ ನಲ್ಲಿ ಟೋಲ್ ಗೇಟ್ ನಿರ್ಮಾಣ ಸಂದರ್ಭದಲ್ಲಿ ಕೊಟ್ಟ ಭರವಸೆ ಯಂತೆ ಹೆಜಮಾಡಿ ಟೋಲ್ ಗೇಟ್ ಪ್ರಾರಂಭವಾದರೆ ಇದನ್ನು ಮುಚ್ಚುತ್ತೇವೆ ಎಂದು ಹೇಳಿ ಇದೀಗ ಅನಧಿಕೃತವಾಗಿ ಕಾರ್ಯಾಚರಿಸುತ್ತಿರುವ ಸುರತ್ಕಲ್ ಟೋಲ್ ಗೇಟ್ ಮೂಲಕ ಉಭಯ ಜಿಲ್ಲೆಯ ಸಂಸದರು ಮತ್ತು ಶಾಸಕರು ತಮ್ಮ ಖಜಾನೆ ತುಂಬಿಸುತ್ತಿರುವುದು ತುಳುನಾಡಿನ ಜನರ ವಿಪರ್ಯಾಸ. ಟೋಲ್ ಗೇಟ್ ಎಂಬ ಸುಲಿಗೆ ಕೇಂದ್ರದ ಮೂಲಕ ತುಳುನಾಡಿನ ಜನರ ರಕ್ತ ಹೀರುತ್ತಿರುವ ಬಿಜೆಪಿಯ ಜನಪ್ರತಿನಿಧಿಗಳು ಜನರನ್ನು ಪೀಡಿಸುತ್ತಿರುವುದು ತುಳು ಜನರ ದುರ್ದೈವವೆ ಸರಿ.
ಉಡುಪಿ ಮಂಗಳೂರಿಗೆ ಹೋಗಲು ಉಡುಪಿ ಜನರು ಎರಡು ಕಡೆ ಟೋಲ್ ಪಾವತಿಸಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ತಾಗಿಕೊಂಡಿರುವ ಕಾಪು ಕ್ಷೇತ್ರದ ಜನತೆಯ ಗೋಳನ್ನು ಕೇಳುವ ತಾಳ್ಮೆ ಕಾಪು ಶಾಸಕ ಲಾಲಾಜಿ ಮೆಂಡನ್ ಗೆ ಇಲ್ಲವೇ ಎಂದರು.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಶೇಖರ್ ಹೆಜಮಾಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್, ನಾಗೇಶ್ ಉದ್ಯಾವರ, ಎಂ.ಪಿ.ಮೊಯಿದಿನಬ್ಬ, ಜಿತೇಂದ್ರ ಫುರ್ಟಾಡೋ, ವಿಲ್ಸನ್ ರಾಡ್ರಿಗಸ್, ಗೀತಾ ವಾಗ್ಲೆ, ಸಂತೋಷ್ ಶೆಟ್ಟಿ ಕೊಡಿಬೆಟ್ಟು ಮತ್ತಿತರರು ಧರಣಿಯನ್ನುದ್ದೇಶಿಸಿ ಮಾತನಾಡಿದರು.
ಧರಣಿಯಲ್ಲಿ ಶಾಂತಲತಾ ಶೆಟ್ಟಿ, ಪ್ರಭಾ ಬಿ.ಶೆಟ್ಟಿ, ಮೊಹಮ್ಮದ್ ಸಾದಿಕ್, ವಿನಯ್ ಬಲ್ಲಾಳ್, ವೈ. ಸುಕುಮಾರ್, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ರಮೀಜ್ ಹುಸೈನ್, ಶರ್ಪುದ್ದೀನ್ ಶೇಖ್, ಅಶ್ವಿನಿ ಬಂಗೇರ, ಫರ್ಜಾನ, ಸಂಜಯ್, ಶೋಭಾ ಬಂಗೇರ, ರಾಧಿಕಾ ಸುವರ್ಣ, ವಿದ್ಯಾಲತಾ, ಸತೀಶ್ಚಂದ್ರ ಮೂಳೂರು, ಮೊಹಮ್ಮದ್ ಆಸಿಫ್, ವೈ.ಸುಧೀರ್, ಮಹೇಶ್ ಶೆಟ್ಟಿ ಕುರ್ಕಾಲು, ಇಂದಿರಾ ಆಚಾರ್ಯ, ಜ್ಯೋತಿ ಗಣೇಶ್ ಉಚ್ಚಿಲ, ಕಿಶೋರ್ ಅಂಬಾಡಿ, ರತನ್ ಶೆಟ್ಟಿ, ಗ್ರೇಸಿ ಕಾರ್ಡೊಝ, ರಹಿಮಾನ್ ಕಣ್ಣಂಗಾರ್, ವಿಲ್ಸನ್ ರಾಡ್ರಿಗಸ್, ನವೀನ್ ಎನ್. ಶೆಟ್ಟಿ, ಸುನಿಲ್ ಡಿ.ಬಂಗೇರ, ಕೆ.ಎಚ್. ಉಸ್ಮಾನ್, ರಾಜೇಶ್ ಕುಲಾಲ್, ರೋಹನ್ ಕುತ್ಯಾರ್, ಸುಭಾಸ್ ಹೆಜಮಾಡಿ, ಮಧ್ವರಾಜ್ ಬಂಗೇರ, ರಾಜೇಶ್ ಮೆಂಡನ್, ಲವ ಕರ್ಕೇರ, ಹರೀಶ್ ನಾಯಕ್, ಇಮ್ರಾನ್ ಮಜೂರ್, ಗೋಪಾಲ ಪೂಜಾರಿ ಫಲಿಮಾರು, ರಾಜೇಶ್ ಶೆಟ್ಟಿ ಪಾಂಗಳ, ಆಶಾ ಕಟಪಾಡಿ, ಅರುಣಾ ಕುಮಾರಿ, ಬಾಲಚಂದ್ರ ಎರ್ಮಾಳ್, ಕಿಶೋರ್ ಎರ್ಮಾಳ್, ಮೆಲ್ವಿನ್ ಡಿಸೋಜ, ಶ್ರೀಕರ್ ಅಂಚನ್, ಸುಧೀರ್ ಕರ್ಕೇರ, ಕರುಣಾಕರ್ ಪಡುಬಿದ್ರಿ, ಕೇಶವ್ ಸಾಲ್ಯಾನ್, ನಯೀಮ್ ಕಟಪಾಡಿ, ಮುಬೀನಾ, ರೀನಾ ಡಿಸೋಜ, ದೀಪ್ತಿ ಮನೋಜ್, ನಾಗಭೂಷಣ್ ಮಜೂರು , ಪ್ರಶಾಂತ್ ಕುಮಾರ್ ಹಿರಿಯಡಕ,
ಯು.ಸಿ.ಶೇಕಬ್ಬ, ಸತೀಶ್ ಡೇಜಾಡಿ, ಯಶವಂತ ಪಲಿಮಾರ್ ಮತ್ತು ವಿವಿಧ ಮುಂಚೂಣಿ ಘಟಕ/ಸಮಿತಿಗಳ ಪದಾಧಿಕಾರಿಗಳು, ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋರಾಟ ಸಮಿತಿಯ ಸಹ-ಸಂಚಾಲಕ ಶೇಖರ್ ಹೆಜಮಾಡಿ ಸ್ವಾಗತಿಸಿ, ಪ್ರಸ್ತಾವನೆ ಗೈದರು. ಟೋಲ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ದಿಕ್ಸೂಚಿ ಭಾಷಣ ಮಾಡಿದರು. ಕಾಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು ನಿರೂಪಿಸಿ, ವಂದಿಸಿದರು.