ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ : ಬ್ಲೂ ಫ್ಲ್ಯಾಗ್ ಬೀಚ್ನಲ್ಲಿ ಜರಗಿದ ವರ್ಣ ವಿಹಾರ -2022 ; 400 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

Posted On: 12-11-2022 09:25PM

ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ, ಪ್ರವಾಸೋದ್ಯಮ ಇಲಾಖೆ ಉಡುಪಿ, ಬ್ಲೂ ಫ್ಲ್ಯಾಗ್ ಬೀಚ್ ಪಡುಬಿದ್ರಿ ಜಂಟಿ ಸಹಯೋಗದೊಂದಿಗೆ ಉಜ್ವಲ್ ಡಿಸೈನ್ಸ್ ಮತ್ತು ಪ್ರಿಂಟಿಂಗ್ಸ್ ಪಡುಬಿದ್ರಿ ಪ್ರಾಯೋಜಕತ್ವದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ನಲ್ಲಿ ವರ್ಣ ವಿಹಾರ -2022 ಉಭಯ ಜಿಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಶನಿವಾರ ಜರಗಿತು. ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಪಡುಬಿದ್ರಿ ಅಧ್ಯಕ್ಷರಾದ ಗೀತಾ ಅರುಣ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲೆ 3182 ರ ವಲಯ 5 ರ ಸಹಾಯಕ ಗವರ್ನರ್ ಡಾ| ಶಶಿಕಾಂತ ಕರಿಂಕ, ಎಚ್ ಎನ್ ಗುರುಪ್ರಸಾದ್, ವೈ ಸುಧೀರ್ ಕುಮಾರ್, ಮಾಧವ ಸುವರ್ಣ, ಸುಕುಮಾರ್ ಶ್ರೀಯಾನ್, ಪತ್ರಕರ್ತ ಸುರೇಶ್ ಎಮಾಳು, ಗಣೇಶ್ ಆಚಾರ್ಯ ಉಚ್ಚಿಲ, ಗಂಗಾಧರ ಕರ್ಕೇರ, ಅಬ್ದುಲ್ ಹಮೀದ್, ಕಿರಣ್ ರಾಜ್ ಕರ್ಕೇರ, ಅಶೋಕ್ ಸಾಲ್ಯಾನ್, ಭವಿಷ್, ಕಾರ್ಯಕ್ರಮದ ನಿರ್ದೇಶಕರಾದ ತಸ್ನೀನ್ ಅರಾ, ಮಹಮ್ಮದ್ ನಿಯಾಝ್, ‌ಗಣೇಶ್ ಶೆಟ್ಟಿಗಾರ್, ರೂಪ ವಸುಂಧರಾ, ಕಾರ್ಯದರ್ಶಿ ಜ್ಯೋತಿ ಮೆನನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸನ್ಮಾನ : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಫಲಿಮಾರು, ವೆಂಕಟೇಶ ದೇವಾಡಿಗ, ಪತ್ರಕರ್ತ ರಾಮಚಂದ್ರ ಆಚಾರ್ಯರನ್ನು ಸನ್ಮಾನಿಸಲಾಯಿತು.

ಬಹುಮಾನ ವಿಜೇತರು : ಒಂದರಿಂದ ನಾಲ್ಕನೇ ತರಗತಿಯ ವಿಭಾಗದಲ್ಲಿ ನನ್ನ ಕಲ್ಪನೆಯ ಶಾಲೆ ವಿಷಯದಲ್ಲಿ ಪ್ರಥಮ ಬಹುಮಾನವನ್ನು ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮುಲ್ಕಿ ವಿದ್ಯಾರ್ಥಿ ಚವಿ ಎಸ್ ಅಮೀನ್, ದ್ವಿತೀಯ ಬಹುಮಾನವನ್ನು ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಾನ್ವಿ ಎಸ್ ದೇವಾಡಿಗ. ಐದರಿಂದ ಎಂಟನೇ ತರಗತಿಯ ವಿಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ವಿಷಯದಲ್ಲಿ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ ಮುಲ್ಕಿ ವಿದ್ಯಾರ್ಥಿ ಅಜಿತ್ ಎಸ್ ಕಾಮತ್ ಪ್ರಥಮ, ವಿದ್ಯಾ ಪ್ರಸಾರ ವಿದ್ಯಾ ಮಂದಿರ್ ಶಾಲೆಯ ಜ್ಞಾನೇಶ್ ದ್ವಿತೀಯ. 9 ರಿಂದ 12ನೇ ತರಗತಿಯ ವಿಭಾಗದಲ್ಲಿ ಪ್ರಕೃತಿ ವಿಷಯದಲ್ಲಿ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ ಮುಲ್ಕಿ ಶಾಲೆಯ ಅಥರ್ವ ಪ್ರಥಮ, ಗಣಪತಿ ಪ್ರೌಢಶಾಲೆ ಪಡುಬಿದ್ರಿಯ ಪ್ರಖ್ಯಾತ್ ದ್ವಿತೀಯ. ಸಾರ್ವಜನಿಕ ವಿಭಾಗದಲ್ಲಿ ಅರ್ಚನಾ ಭಟ್ ಪ್ರಥಮ, ಇರ್ಫಾನ್ ಶೇಕ್ ದ್ವಿತೀಯ ಬಹುಮಾನ ಪಡೆದಿರುತ್ತಾರೆ.

ಕಾರ್ಯಕ್ರಮದಲ್ಲಿ ರೋಟರಿ ಪದಾಧಿಕಾರಿಗಳು, ಸದಸ್ಯರು, ರೋಟರಿ ಸಮುದಾಯ ದಳದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ಪಿ ಎನ್ ಆಚಾರ್ಯ ಮತ್ತು ಗುರುಪ್ರಸಾದ್ ಸಹಕರಿಸಿದ್ದರು. ರೋಟರಿ ಅಧ್ಯಕ್ಷರಾದ ಗೀತಾ ಅರುಣ್ ಸ್ವಾಗತಿಸಿದರು. ಬಹುಮಾನಿತರ ಪಟ್ಟಿಯನ್ನು ಯಶೋದ ವಾಚಿಸಿದರು. ಕಾರ್ಯಕ್ರಮವನ್ನು ಸುಧಾಕರ್ ನಿರೂಪಿಸಿದರು.