ಪಲಿಮಾರು : ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಪಲಿಮಾರು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 2.06 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 17 ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದ್ದು. ಬಿಜೆಪಿ ನೇತೃತ್ವದ ಪಲಿಮಾರು ಗ್ರಾಮ ಪಂಚಾಯತ್ ಉತ್ತಮವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದು ಪಂಚಾಯತ್ ಸದಸ್ಯರು ಜನರೊಂದಿಗೆ ನಿಕಟಸಂಪರ್ಕ ಹೊಂದಿದ್ದು ಜನಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು. ಈಗಾಗಲೇ 13 ಕೋಟಿ 20 ಲಕ್ಷ ಅನುದಾನದಲ್ಲೂ ಪಲಿಮಾರು ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ರಸ್ತೆಗಳಿಗೆ ಹೊಸ ಕಾಯಕಲ್ಪ, ದೇವಸ್ಥಾನ - ದೈವಸ್ಥಾನಗಳಿಗೆ ಹೆಚ್ಚಿನ ಮೊತ್ತದ ಅನುದಾನ ಮಿಸಲಿರಿಸಿದೆ,ಇನ್ನು ಹೆಚ್ಚಿನ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಮೂಡು ಫಲಿಮಾರು ಅಣಿಕಟ್ಟು ಪ್ರದೇಶದ ಕಾಲುವೆ ಅಭಿವೃದ್ಧಿ, ಮೂಡು ಫಲಿಮಾರು ಕರಣೀಕರಕಟ್ಟೆಯಿಂದ ರಿಕ್ಷಾನಿಲ್ದಾಣದವರೆಗೆ ರಸ್ತೆ ಅಭಿವೃದ್ಧಿ, ಮೂಡು ಫಲಿಮಾರು ಕುಂಪಳಿ ರಸ್ತೆ ಅಭಿವೃದ್ಧಿ, ಮೂಡು ಫಲಿಮಾರು ನವೀನ್ ಕುಕ್ಯಾನ್ ಮನೆ ಬಳಿ ರಸ್ತೆ ಅಭಿವೃದ್ಧಿ, ಮೂಡು ಫಲಿಮಾರು ಮೂಡು ಮನೆ ರಸ್ತೆ ಅಭಿವೃದ್ಧಿ,
ಮೂಡು ಫಲಿಮಾರು ಸುಭಾಷ್ ನಗರ ಚರಂಡಿ ಅಭಿವೃದ್ಧಿ, ಫಲಿಮಾರು ಹಾಗೂ ನಂದಿಕೂರು ಗ್ರಾಮದ ಆಯ್ದ ಬೀದಿಗಳಿಗೆ ಸೋಲಾರ್ ದಾರಿದೀಪ ಅಳವಡಿಕೆ, ಬೆರಂದಿಕಟ್ಟೆ –ರೈಲ್ವೆ ಸ್ಟೇಷನ್ ಸಂಪರ್ಕ ರಸ್ತೆ ಅಭಿವೃದ್ಧಿ, ನಂದಿಕೂರು ಗ್ರಾಮದ ರಾಜೀವ್‌ನಗರ ಕಾಲನಿ ರಸ್ತೆ ಅಭಿವೃದ್ಧಿ,
ಅಡ್ವೇ ಬೆಳ್ಳಿಬೆಟ್ಟು ರಸ್ತೆ ಅಭಿವೃದ್ಧಿ, ನಂದಿಕೂರು ಜೈನ ಬಸದಿ ರಸ್ತೆ ಅಭಿವೃದ್ಧಿ, ನಂದಿಕೂರು ಅನಡ್ಕ ರೈಲ್ವೇ ಟ್ರ್ಯಾಕ್ ಬಳಿ ರಸ್ತೆ ಅಭಿವೃದ್ಧಿ, ಅವರಾಲು ಅಂಗನವಾಡಿ ಕಟ್ಟಡ ರಚನೆ, ನಂದಿಕೂರು ಅಡ್ವೇ ಕೆಂಗಡಗುತ್ತು ರಸ್ತೆ ಅಭಿವೃದ್ಧಿ, ಪಟ್ಟೆಂಜೆ ಕಾಲಾಡಿ ರಸ್ತೆ ಅಭಿವೃದ್ಧಿ, ನಂದಿಕೂರು ಕಲ್ಲಾರು ರಸ್ತೆ ಅಭಿವೃದ್ಧಿ, ಅಡ್ವೇ ಜಯ ಸುವರ್ಣ ಮನೆ ಬಳಿ ರಸ್ತೆ ಅಭಿವೃದ್ಧಿ ಯೋಜನೆಗಳು ಶಿಲಾನ್ಯಾಸಗೊಂಡ ಕಾಮಗಾರಿಗಳು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಪ್ರಭು, ಉಪಾಧ್ಯಕ್ಷೆ ಸೌಮ್ಯಲತಾ ಶೆಟ್ಟಿ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಧರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವೀಣಾ ವಿವೇಕಾನಂದ, ಶೇಖರ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಕುಮಾರ್, ಮಹೇಶ್ ಶೆಟ್ಟಿ, ರಶ್ಮಿ, ಸುಜಾತಾ, ರಾಯೇಶ್ ಪೈ, ಪ್ರಿಯ ಶೆಟ್ಟಿ, ಸುಮಂಗಲ ದೇವಾಡಿಗ, ಹಾಗೂ ಸ್ಥಳೀಯ ಮುಖಂಡರಾದ ಪ್ರಸಾದ್ ಪಲಿಮಾರು, ಲಕ್ಷ್ಮಣ್ ಶೆಟ್ಟಿ, ಸತೀಶ್ ಶೆಟ್ಟಿ, ಪ್ರವೀಣ್ ಶೆಟ್ಟಿ, ದಿನೇಶ್ ಪಲಿಮಾರು, ನಾರಾಯಣ ದೇವಾಡಿಗ, ವಾಸುದೇವ, ಮದುಕರ್ ಸುವರ್ಣ, ಸುರೇಶ್ ಕುಂಪಲ್ಲಿ, ಹರೀಶ್ ಶೆಟ್ಟಿ, ಪುಷ್ಪವತಿ, ಸದಾನಂದ ಪೂಜಾರಿ, ಹರೀಶ್ ಬಂಗೇರ, ಪ್ರತಾಪ್, ರೋಹಿತ್ ಪೂಜಾರಿ, ಪ್ರಕಾಶ್, ಪ್ರಜ್ವಲ್, ನಾಗರಾಜ್ ಭಟ್, ಚಂದ್ರಶೇಖರ್, ಅಂಗನವಾಡಿ ನಿರ್ಮಿಸಲು ಸ್ಥಳ ದಾನ ಮಾಡಿದ ಅಲ್ಫ್ರೆಡ್ ಪುಟಾರ್ಡೊ, ಕುಟುಂಬಸ್ಥರು ಹಾಗೂ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು.