ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ವೇದಿಕೆಯಲ್ಲಿರುವ ವ್ಯಕ್ತಿಗಳು ದೊಡ್ಡವರಲ್ಲ, ವೇದಿಕೆಯ ಮುಂಭಾಗದಲ್ಲಿರುವ ವ್ಯಕ್ತಿಗಳು ಸಣ್ಣವರಲ್ಲ : ಎನ್. ದಾಮೋದರ ಬರ್ಮಾ ಬರ್ಕಾ

Posted On: 13-11-2022 03:13PM

ಬಂಟಕಲ್ಲು : ವೇದಿಕೆಯಲ್ಲಿರುವ ವ್ಯಕ್ತಿಗಳು ದೊಡ್ಡವರಲ್ಲ ವೇದಿಕೆಯ ಮುಂಭಾಗದಲ್ಲಿರುವ ವ್ಯಕ್ತಿಗಳು ಸಣ್ಣವರಲ್ಲ ಎಂದು ಉತ್ತಮ ಕಾರ್ಯಕ್ರಮ ನಿರೂಪಕ ವಾಗ್ಮಿ ವಿದ್ವಾಂಸರಾದ ಎನ್. ದಾಮೋದರ ಶರ್ಮಾರವರು ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದ ಸಂಸ್ಥೆಯಾದ ಶ್ರೀ ವಿಶ್ವಕರ್ಮ ಯುವಕ ಸೇವಾದಳ ನೂತನ ಸದಸ್ಯರಿಗೆ ನೀಡಿದ ಸಜ್ಜನರು ಸವೆಸಿದ ದಾರಿ ಮಾಹಿತಿ ಕಾರ್ಯಕ್ರಮದಲ್ಲಿ ನಮ್ಮತನವನ್ನು ಉಳಿಸುವುದರ ಜೊತೆಗೆ ನಮ್ಮ ಸಮಾಜವನ್ನು ಬೆಳೆಸುವಂತೆ ಯುವಕರು ಮುನ್ನಡೆಯಬೇಕು ಹಿರಿಯರ ಮನಸ್ಸು ನೋವಾಗದ ರೀತಿಯಲ್ಲಿ ನಾವು ಬದುಕಿ ಬಾಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳು ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಮುರಳಿಧರ ಆಚಾರ್ಯ, ಗೌರವಾಧ್ಯಕ್ಷ ಗಣಪತಿ ಆಚಾರ್ಯ, ನಿಕಟ ಪೂರ್ವ ಅಧ್ಯಕ್ಷ ಬಿಳಿಯಾರು ಸುರೇಶ ಆಚಾರ್ಯ, ಗಾಯತ್ರಿ ವೃಂದದ ಅಧ್ಯಕ್ಷೆ ಮಾಲತಿ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೇವಾದಳದ ಅಧ್ಯಕ್ಷ ರಾಜೇಶ್ ಆಚಾರ್ಯ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಭರತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ವಿಜಯೇಂದ್ರ ಆಚಾರ್ಯ ವಂದಿಸಿದರು. ಸುಮಾರು 30ಕ್ಕೂ ಅಧಿಕ ನೂತನ ಸದಸ್ಯರು ಭಾಗವಹಿಸಿದ್ದರು.