ಮಂಗಳೂರು : ಪ್ರಸ್ತುತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೆಲವಡೆ ಮಕ್ಕಳಿಗೆ ಕಣ್ಣಿನ ಸಾಂಕ್ರಾಮಿಕ ರೋಗವಾದ ಕೆಂಗಣ್ಣು (ಕೆಂಪು ಕಣ್ಣು) ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯ ಆರೋಗ್ಯಾಧಿಕಾರಿಗಳ ಸೂಚನೆಯ ಮೇರೆಗೆ
ದಕ್ಷಿಣಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ಅದರ ಪ್ರಕಾರ ಕೆಂಗಣ್ಣು ಸಾಂಕ್ರಾಮಿಕವಾಗಿದ್ದು ಮಕ್ಕಳಿಗೆ ಶೀಘ್ರವಾಗಿ ಹರಡುತ್ತದೆ. ಆದುದರಿಂದ ಈ ಕಾಯಿಲೆ ಬಂದ ಮಕ್ಕಳನ್ನು 5 ದಿನ ಶಾಲೆಗೆ ಬರದಂತೆ ತಡೆಯುವುದು ಹಾಗೂ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ಪೋಷಕರಿಗೆ ಮನವರಿಕೆ ಮಾಡಿಕೊಡಲು ತಿಳಿಸಿದ್ದಾರೆ.