ಪಡುಬಿದ್ರಿ : ಕಂಚಿನಡ್ಕ ಸತ್ಯದೇವಿ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ 28 ವರ್ಷದ ಮಹಾಪೂಜೆಯ ಅಂಗವಾಗಿ ಆಯೋಜಿಸಿರುವ ಅಂತರ್ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶನಿವಾರ ನಡೆಯಿತು.
ವಿಶೇಷವಾಗಿ ಅಯ್ಯಪ್ಪ ಮಾಲಾಧಾರಿಗಳ ಶಿಬಿರದಲ್ಲಿ ನಡೆದ ಕ್ಷೇತ್ರಶುದ್ಧಿ,ಗಣಹೋಮ ಸಂದರ್ಭದಲ್ಲಿ ಪಡುಬಿದ್ರಿ ಬ್ರಹ್ಮಸ್ಥಾನದ ನಾಗಪಾತ್ರಿ ಗೌರವಾನ್ವಿತ ಸುರೇಶ್ ಭಟ್ ಅವರ ದಿವ್ಯ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಪ್ರಭು, ಕರ್ನಾಟಕ ರಾಜ್ಯ ಸರ್ಕಾರದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಿಥುನ್.ಆರ್.ಹೆಗ್ಡೆ, ಪಡುಬಿದ್ರಿ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಗುರುರಾಜ್ ಪೂಜಾರಿ,ಕೊಂಕನಡ್ಪು ಕೋಡ್ದಬ್ಬು ದೈವಸ್ಥಾನ ಪ್ರ.ಅರ್ಚಕರಾದ ಬಾಬು ಮುಖಾರಿ, ಕಾಪು ಪ್ರಖಂಡ ವಿಹಿಂಪ ಮುಖಂಡರಾದ ರಾಜೇಂದ್ರ ಶೆಣೈ, ಹಿಂಜಾವೇ ಮುಖಂಡ ರಾಜೇಶ್ ಉಚ್ಚಿಲ,ಊರಿನ ಹಿರಿಯರಾದ ಸುಬ್ಬ ಕಂಚಿನಡ್ಕ, ಕೃಷ್ಣ ಗುರುಸ್ವಾಮಿ, ಸಮಿತಿಯ ಅಧ್ಯಕ್ಷ ಶಿವಪ್ಪ ಸಾಲ್ಯಾನ್ ಮೊದಲಾದವದರು ಉಪಸ್ಥಿತರಿದ್ದರು.