ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಲಿಮಾರು : ಹೊೖಗೆ ಫ್ರೆಂಡ್ಸ್ ವತಿಯಿಂದ ಹಾವು ನಾವು ಮತ್ತು ಪರಿಸರ ಜಾಗೃತಿ ಪ್ರಾತ್ಯಕ್ಷಿಕೆ

Posted On: 24-11-2022 06:34PM

ಪಲಿಮಾರು : ಇಲ್ಲಿನ ಹೊೖಗೆ ಫ್ರೆಂಡ್ಸ್ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ, ಖ್ಯಾತ ಉರಗ ತಜ್ಞ ಗುರುರಾಜ್ ಸನಿಲ್ ಉಡುಪಿ ಇವರಿಂದ 'ಹಾವು ನಾವು ಮತ್ತು ಪರಿಸರ' ಎಂಬ ವಿಷಯದ ಕುರಿತು ಜಾಗೃತಿ ಮೂಡಿಸುವ ಪ್ರಾತ್ಯಕ್ಷಿಕೆ ನಡೆಯಿತು.

ಜೀವಂತ ಹಾವುಗಳನ್ನು ತಂದು, ಅವುಗಳ ಪರಿಚಯವನ್ನು ಮಾಡಿಸಿದರು. ಹಾವುಗಳು ಕಾರಣವಿಲ್ಲದೆ ಯಾರಿಗೂ ಕಚ್ಚುವುದಿಲ್ಲ ವಿದ್ಯಾರ್ಥಿಗಳು ಹಾವುಗಳನ್ನು ಕಂಡು ಭಯಪಡಬೇಕಾಗಿಲ್ಲ ಎಂಬುದಾಗಿ, ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಗ್ರೆಟ್ಟಾ ಮೊರಾಸ್ ಅಧ್ಯಕ್ಷತೆ ವಹಿಸಿದ್ದರು. ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಡಿ ಪ್ರಭು , ಉಪಾಧ್ಯಕ್ಷರಾದ ಸೌಮ್ಯಲತ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರಸಾದ್ ಪಲಿಮಾರ್, ಹೊೖಗೆ ಫ್ರೆಂಡ್ಸ್ ಅಧ್ಯಕ್ಷರಾದ ರಾಘವೇಂದ್ರ ಜೆ ಸುವರ್ಣ, ಉಪಾಧ್ಯಕ್ಷ ರಿತೇಶ್ ದೇವಾಡಿಗ, ಪಂಚಾಯತ್ ಸದಸ್ಯರಾದ ಸುಮಂಗಳ ದೇವಾಡಿಗ, ರಾಯೆಶ್ವರ ಪೈ , ಸುಜಾತಾ ,ಪ್ರೌಢಶಾಲಾ ವಿಭಾಗದ ಹಿರಿಯ ಸಹಶಿಕ್ಷಕಿ ಸುನಿತಾ, ಟೆರಾಕೋಟ ಕಲಾವಿದ ವೆಂಕಿ ಪಲಿಮಾರ್ ಉಪಸ್ಥಿತರಿದ್ದರು.

ಉಪನ್ಯಾಸಕಿ ವಿಜಯಲಕ್ಷ್ಮಿ ಸ್ವಾಗತಿಸಿದರು. ಸಹಶಿಕ್ಷಕಿ ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಹಶಿಕ್ಷಕಿ ಸುನಿತಾ ವಂದಿಸಿದರು.