ಕಾಪು : ಇಲ್ಲಿನ ಕುತ್ಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಮಹೋತ್ಸವ ಡಿಸೆಂಬರ್ 16ರಂದು ಜರಗಲಿದ್ದು ಆ ಪ್ರಯುಕ್ತ ಬೆಳಿಗ್ಗೆ 8.30ಕ್ಕೆ ಬಿಂಬ ಪ್ರತಿಷ್ಠೆ, ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ದೇವಿ ದರ್ಶನ, ಮಧ್ಯಾಹ್ನ 1.30 ಕ್ಕೆ ಅನ್ನ ಪ್ರಸಾದ ಹಾಗೂ ಸಂಜೆ 7 ಗಂಟೆಗೆ ಭಜನೆ, ರಾತ್ರಿ 10 ಗಂಟೆಗೆ ಮಹಾಪೂಜೆ, ದೇವಿ ದರ್ಶನ, ಪ್ರಸಾದ ವಿತರಣೆ, ಬಿಂಬ ವಿಸರ್ಜನೆ ನಡೆಯಲಿದೆ.