ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕ್ರಿಯೇಟಿವ್‌ ಪಿಯು ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

Posted On: 27-11-2022 12:48PM

ಕಾರ್ಕಳ : ಇಲ್ಲಿನ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನವೆಂಬರ್‌ 26 ರಂದು ಸಂವಿಧಾನ ದಿನಾಚರಣೆ ನಡೆಯಿತು. ಭಾರತದ ಸಾರ್ವಭೌಮತೆಯ ರಕ್ಷಣೆ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸಲು ಸಂವಿಧಾನದ ರಚನೆಯನ್ನು ಮಾಡಲಾಯಿತು.

ದೇಶದ ಪ್ರಜೆಗಳು ದೇಶದ ಕಾನೂನನ್ನು ಗೌರವಿಸಿ ಮತ್ತು ಸಂವಿಧಾನದ ಆಶಯದಂತೆ ಬದುಕನ್ನು ನಡೆಸಬೇಕು ಎಂದು ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ವಿದ್ಯಾರ್ಥಿಗಳಿಗೆ ತಿಳಿಸಿದರು. ಸಂವಿಧಾನವನ್ನು ರಚನೆ ಮಾಡಬೇಕಾದರೆ ಅನೇಕ ದೇಶಗಳಲ್ಲಿರುವ ಕಾಯ್ದೆ, ಕಾನೂನುಗಳನ್ನು ಅಳವಾಗಿ ಅಧ್ಯಯನ ನಡೆಸಿ ಎಲ್ಲರಿಗೂ ನ್ಯಾಯ ಸಿಗುವಂತೆ ರಚಿಸಲಾಗಿದೆ. ಡಾ. ಬಿ ಆರ್‌ ಅಂಬೇಡ್ಕರ್‌ ಅವರನ್ನು ಸಂವಿಧಾನ ರಚನಾ ಕರಡು ಸಮೀತಿಯ ಅಧ್ಯಕ್ಷರನ್ನಾಗಿ ನೇಮಿಸಿ ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಲಿಖಿತ ಸಂವಿಧಾನವನ್ನು ರಚಿಸಲಾಯಿತು. ಅವರ ಆಶಯಕ್ಕೆ ಅನುಗುಣವಾಗಿ ದೇಶದ ಸಮಗ್ರತೆಯನ್ನು ಗೌರವಿಸಿ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸಬೇಕೆಂದು ಕರೆ ನೀಡಿದರು.

ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ರಾಘವೇಂದ್ರ ಬಿ ರಾವ್‌, ಶಿವಕುಮಾರ್‌, ಉಮೇಶ್‌, ಅಕ್ಷತಾ ಜೈನ್‌, ರಾಮಕೃಷ್ಣ ಹೆಗಡೆ, ಡಾ ಆದಂ ಶೇಕ್‌, ಸಾರ್ವಜನಿಕ ಸಂಪರ್ಕ ಅಧಿಕಾರಿ ಲಿಶನ್‌ ಗೌಡ ಉಪಸ್ಥಿತರಿದ್ದರು.