ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಭೃಷ್ಟಾಚಾರದ ಸರಕಾರದಿಂದ ಟೋಲ್ ದರೋಡೆ : ರಮೀಜ್ ಹುಸೇನ್‌

Posted On: 27-11-2022 12:50PM

ಪಡುಬಿದ್ರಿ : ಅತ್ಯಂತ ಕಠೋರ ಹೃದಯದ ಜನ ವಿರೋಧಿ ಸರಕಾರದ ನಿರ್ಧಾರ ಜನರ‌ ಬದುಕಿನಲ್ಲಿ ಚೆಲ್ಲಾಟ ನಡೆಸುತ್ತಿದೆ. ಸುರತ್ಕಲ್ ಟೋಲ್ ಅನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ಸಮಾನ ಮನಸ್ಕರನ್ನು ಸೇರಿಸಿ ಟೋಲ್ ಹೋರಾಟ ಸಮಿತಿ ಅನಿರ್ಧಿಷ್ಟ ಅವಧಿ ಹಗಲು ರಾತ್ರಿ ಧರಣಿಯನ್ನು ಹಮ್ಮಿಕೊಂಡಿರುವ ಪರಿಣಾಮ ಸುರತ್ಕಲ್ ಟೋಲ್ ನ್ನು ರದ್ದು ಮಾಡುತ್ತೇವೆ ಅನ್ನುತ್ತಿದ್ದ ಜನಪ್ರತಿನಿಧಿಗಳು , ಇಂದು ವಿಲೀನದ ನೆಪ ಹೇಳಿ ಸುರತ್ಕಲ್ ಟೋಲ್ ದರವನ್ನು ಹೆಜಮಾಡಿ ಟೋಲ್ ನಲ್ಲಿ ಪೂರ್ತಿಯಾಗಿ ಸೇರಿಸಿ ಹಣ ಸಂಗ್ರಹಿಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.

ಈ ದುಪ್ಟಟು ದರವನ್ನು ಜನ ಸಾಮಾನ್ಯರು ಕಟ್ಟುವಂತಹ ಪರಿಸ್ಥಿತಿ ಒದಗಿ ಬಂದಿದೆ. ದಿನದಿಂದ ‌ದಿನಕ್ಕೆ ಗಗನಕ್ಕೆ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಒಂದಡೆಯಾದರೆ, ಈಗ ಟೋಲ್ ಮೂಲಕ ಜನರ ಸುಲಿಗೆ ನಡೆಸಿ ಜನ ಸಾಮಾನ್ಯನ ಬದುಕಿಗೆ ಕೊಳ್ಳಿ ದೀಪ ಇಡಲು ಸರಕಾರ ತಯಾರಿ ನಡೆಸುತಿದೆ. ಇದೇ‌ ರೀತಿ ಮುಂದುವರಿದಲ್ಲಿ ಅರ್ಥಿಕವಾಗಿ ಕುಗ್ಗಿರುವ ಜನರ ಬದುಕು ಕಂಗಲಾಗುವ ಪರಿಸ್ಥಿತಿಗೆ ಬರುವಂತೆ ಈ ಸರಕಾರ ಮಾಡುತಿದೆ ಎಂದು ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್‌ ಆಗ್ರಹಿಸಿದ್ದಾರೆ.

ಈಗಾಗಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಷ್ಕೃತ ದರದಲ್ಲಿ ಡಿಸೆಂಬರ್ 1 ರಿಂದ ಹೆಜಮಾಡಿ ಟೋಲ್ ನಲ್ಲಿ ದುಪ್ಪಟ್ಟು ಟೋಲ್ ವಸೂಲಿ ನಡೆಯಲಿದೆ. ಇದರಿಂದ ಹೆಜಮಾಡಿ, ಪಡುಬಿದ್ರಿ ಆಸುಪಾಸಿನ ಜನರು ಕೇವಲ 6 ಕಿ.ಮಿ ದೂರದ ಮುಲ್ಕಿ ಗೆ ಕಾರಿನಲ್ಲಿ ಹೋಗಿ ಬರಬೇಕಾದರೆ ಹೆಜಮಾಡಿ ಟೋಲ್ ನಲ್ಲಿ 155 ರೂಪಾಯಿಯನ್ನು ಕಟ್ಟಬೇಕಾಗಿದೆ ಇಂತಹ ಹಗಲು ದರೋಡೆಯನ್ನು ಯಾವುದೇ ಕಾರಣಕ್ಕೂ ಒಪ್ಪುವಂತದ್ದಲ್ಲ. ಇದು ಡಬಲ್ ಇಂಜಿನ್ ಸರಕಾರದ ಡಬಲ್ ಲೂಟಿ, ಇಷ್ಟಾದರೂ ಇನ್ನೂ ಬಾಯಿ ಮುಚ್ಚಿ ಕುಳಿತಿರುವ ಸರಕಾರ ನಡೆಸುತ್ತಿರುವ ಸ್ಥಳೀಯ ಶಾಸಕರು, ಸಂಸದರು ಧ್ವನಿ ಎತ್ತದಿರುವುದು ವಿಪರ್ಯಾಸವೇ ಸರಿ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ದುಪ್ಪಟ್ಟು ದರವನ್ನು ರದ್ದು ಗೊಳಿಸದ್ದಿದಲ್ಲಿ ಯುವ ಕಾಂಗ್ರೆಸ್ ಜನ ವಿರೋಧಿ ನಿರ್ಧಾರದ ವಿರುದ್ಧ ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆಗೆ ನಡೆಸಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.