ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಶಿರ್ವ ಸಂತ ಮೇರಿ ಕಾಲೇಜಿನಲ್ಲಿ 74ನೇ ಎನ್.ಸಿ.ಸಿ ಹಾಗೂ 73ನೇ ಸಂವಿಧಾನ ದಿನಾಚರಣೆ

Posted On: 27-11-2022 01:41PM

ಶಿರ್ವ : ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ 73ನೇ ಸಂವಿಧಾನ ಹಾಗೂ 74ನೇ ಎನ್‌ಸಿಸಿ ದಿನಾಚರಣೆಯ ಪ್ರಯುಕ್ತ ಪ್ರಕೃತಿಯ ರಕ್ಷಣೆ ಮತ್ತು ಪೋಷಣೆಯ ಅನ್ವಯ ಕ್ಯಾಡೆಟ್ ಗಳಿಂದ ವನಮೋತ್ಸವ ಕಾರ್ಯಕ್ರಮ ಏರ್ಪಡಿಸಲಾಯಿತು. ಸಂವಿಧಾನ ಪ್ರತಿಜ್ಞಾವಿಧಾನವನ್ನು ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್ ರವರು ನೆರವೇರಿಸಿದರು.

ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಇಂದು, ತಮ್ಮ ಪ್ರಾಣದ ಪರಮ ತ್ಯಾಗ ಮಾಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಈ ದಿನವನ್ನು ಪ್ರತಿವರ್ಷ ನವೆಂಬರ್ ನಾಲ್ಕನೇ ಭಾನುವಾರರಂದು ಗುರುತಿಸಲಾಯಿತು. ಇಂದು ಬಹಳಷ್ಟು ಪ್ರಮುಖರು ಎನ್.ಸಿ.ಸಿಯ ಹಳೆವಿದ್ಯಾರ್ಥಿಗಳು ಆಗಿರುವುದು ಗಮನಾರ್ಹ. ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. ನಮ್ಮ ಸಂವಿಧಾನ ಪ್ರಪಂಚದಲ್ಲಿ ಉತ್ತಮವಾದ ಸಂವಿಧಾನ ಎಂದರು.

ಕ್ಯಾಡೆಟ್ ಸೋನಾಲಿ ಕುಲಾಲ್ ಎನ್‌ಸಿಸಿ ದಿನದ ಮುಖ್ಯ ಉದ್ದೇಶವನ್ನು ಮತ್ತು ಮಹತ್ವವನ್ನು ವಿವರಿಸಿ,ಕ್ಯಾಡೆಟ್ ಉಳಿದ್ರಾ ಖುಷಿ ಸಂವಿಧಾನ ದಿನದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು ಇದೇ ಸಂದರ್ಭದಲ್ಲಿ ವಿವಿಧ ತರಬೇತಿಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಕ್ಯಾಡೆಟ್ ಗಳಾದ ಲಾಯ್ ವಿನ್ಸ್ಟನ್ ಫರ್ನಾಂಡಿಸ್, ಸ್ಮಿತಾ, ಕಾರ್ಪೊರಲ್ ರಿಯಾ ಸೇರಿನಾ ಡಿಸೋಜಾ, ವಿಜೇತ ಇವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು. ಎನ್.ಸಿ.ಸಿ ಜೂನಿಯರ್ ಅಂಡರ್ ಆಫೀಸರ್ ಧೀರಜ್ ಆಚಾರ್ಯ, ಕಂಪನಿ ಸಾರ್ಜೆಂಟ್ ಕ್ವಾಟರ್ ಮಾಸ್ಟರ್ ಆಶಿಶ್ ಪ್ರಸಾದ್, ಸರ್ಜೆಂಟ್ ದೀಪಕ್, ರಿಯಾನ್ ಡಿಸೋಜಾ, ಕಾರ್ಪೋರಲ್ ಮಂಜುನಾಥ ಅಮರಾವತಿ, ಲ್ಯಾನ್ಸ್ ಕಾರ್ಪೋರಲ್ ಅನೀಶ್ ಭಟ್, ಶೆಟ್ಟಿಗಾರ ಹೇಮಶ್ರೀ ಸುದರ್ಶನ್ , ಕ್ಯಾಡೆಟ್ ಅನುಪ್ ನಾಯಕ್ ಮತ್ತು ಅಲಿಸ್ಟಾರ್ ಸುಜಯ್ ಡಿಸೋಜ ಸಹಕರಿಸಿದ್ದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಎನ್.ಸಿ.ಸಿ ಅಧಿಕಾರಿ ಜಾನ್ ವಿಲಿಯಂ ವೇಗಾಸ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕಿ ಯಶೋದ, ಎಲ್ಲಾ ಕ್ಯಾಡೆಟ್ಗಳು ಉಪಸ್ಥಿತರಿದ್ದರು. ಸೀನಿಯರ್ ಅಂಡರ್ ಆಫೀಸರ್ ಮೋಹಿತ್ ಎನ್ ಸಾಲಿಯಾನ್ ಸ್ವಾಗತಿಸಿ ಸುಶ್ಮಿತಾ ಎಸ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಪೊರಲ್ ರಿಯಾ ಸೇರಿನಾ ಡಿಸೋಜಾ ವಂದಿಸಿದರು.