ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನಿರಂತರ್ ಉದ್ಯಾವರ ಸಂಘಟನೆಗೆ ಐದನೇ ವರ್ಷದ ಸಂಭ್ರಮ : ನೂತನ ಅಧ್ಯಕ್ಷರಾಗಿ ರೋಶನ್ ಕ್ರಾಸ್ಟೋ ಆಯ್ಕೆ

Posted On: 28-11-2022 09:14PM

ಉದ್ಯಾವರ : ಕಲೆ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿರುವ ನಿರಂತ್ ಉದ್ಯಾವರ ಇದರ ಐದನೇ ವರ್ಷದ ಅಧ್ಯಕ್ಷರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ವಿಶ್ವಾಸಾರ್ಹ ಸೇವೆ ಸಲ್ಲಿಸಿರುವ ರೋಶನ್ ಕ್ರಾಸ್ಟೋ ಆಯ್ಕೆಗೊಂಡಿದ್ದಾರೆ.

ಜೆಸಿಐ ಉದ್ಯಾವರ ಕುತ್ಪಾಡಿ, ಐಸಿವೈಎಂ ಉದ್ಯಾವರ ಇದರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರೋಶನ್, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಹಾಗೂ ಉದ್ಯಾವರ ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ಆರ್ಥಿಕ ಮತ್ತು ಪಾಲನ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ನಿರಂತರ್ ಉದ್ಯಾವರ 2022- 23ನೇ ಸಾಲಿನ ಕಾರ್ಯಕಾರಿ ಸಮಿತಿ ಹೀಗಿದೆ : ಅಧ್ಯಕ್ಷರಾಗಿ ರೋಷನ್ ಕ್ರಾಸ್ಟೋ, ಕಾರ್ಯದರ್ಶಿಯಾಗಿ ಒಲಿವೀರ ಮತಯಸ್, ಕೋಶಾಧಿಕಾರಿಯಾಗಿ ಸುನಿಲ್ ಡಿಸೋಜಾ, ಉಪಾಧ್ಯಕ್ಷರಾಗಿ ರೋಶನ್ ಡಿಸೋಜಾ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜೂಲಿಯ ಡಿಸೋಜಾ, ಮಾಧ್ಯಮ ಪ್ರತಿನಿಧಿಯಾಗಿ ಅನಿಲ್ ಡಿಸೋಜ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮೈಕಲ್ ಡಿಸೋಜಾ, ಸವಿತಾ ಡಿಸೋಜಾ, ರೊನಾಲ್ಡ್ ಡಿಸೋಜಾ, ಜುಡಿತ್ ಪಿರೇರಾ, ಸಿಂತಿಯಾ ನೊರೋನ್ನಾ, ಗೌರವ ಸದಸ್ಯರಾಗಿ ತಿಯಾದೋರ್ ಪಿರೇರಾ, ಆಲ್ವಿನ್ ಡಿಸೋಜಾ, ವಿಕ್ಟರ್ ಮತಾಯಸ್ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಸ್ಟೀವನ್ ಕುಲಾಸೊ ಕಾರ್ಯಕಾರಿ ಸಮಿತಿಯ ಆಯ್ಕೆಯನ್ನು ನಡೆಸಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಮೂರು ದಿನದ ನಿರಂತರ ನಾಟಕೋತ್ಸವವನ್ನು ಹಮ್ಮಿಕೊಂಡಿರುವ ಸಂಘಟನೆಯು ಕವಿತಾ ಗೋಸ್ಟಿ ಸಹಿತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಐದನೇ ವರ್ಷದ ಸಂಭ್ರಮದ ಪ್ರಯುಕ್ತ ಫೆಬ್ರವರಿ ಒಂದರಿಂದ ಐದನೇ ತಾರೀಖಿನವರೆಗೆ 5 ದಿನದ ಬಹುಭಾಷಾ ನಿರಂತರ ನಾಟಕೋತ್ಸವ ಉದ್ಯಾವರದಲ್ಲಿ ನಡೆಯಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.