ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ಇದರ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಸಿದ್ಧತೆ ಮತ್ತು ವಿದ್ಯಾರ್ಥಿ ನಾಯಕತ್ವದ ಬಗ್ಗೆ ಮಾಹಿತಿ ಕಾರ್ಯಕ್ರಮ ಸೋಮವಾರ ಗಣಪತಿ ಪ್ರೌಢ ಶಾಲೆ ಪಡುಬಿದ್ರಿ ಇಲ್ಲಿ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಪುಷ್ಪರಾಣಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋ. ಗೀತಾ ಅರುಣ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ವಲಯ 5 ರ ಪೂರ್ವ ಸಹಾಯಕ ಗವರ್ನರ್ ರೋ. ಪಿ.ಎಚ್.ಎಫ್ ಗಣೇಶ್ ಆಚಾರ್ಯ ಉಚ್ಚಿಲ ರೋಟರಿ ವಲಯ 5 ರ ಕಾರ್ಯದರ್ಶಿ ರೋ. ಸಂತೋಷ್, ಪಡುಬಿದ್ರಿ ಗಣಪತಿ ಶಾಲೆಯ ಮುಖ್ಯೋಪಾಧ್ಯಾಯ ಗಣಪತಿ ಭಟ್, ರೋ. ತಸ್ನೀನ್ ಅರಾ, ರೋ.ಪುಷ್ಪಲತಾ ಗಂಗಾಧರ್, ರೋ. ಪವನ್ ಸಾಲ್ಯಾನ್, ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ರಂಜಿತ್ ದೇವಾಡಿಗ, ಚಯರ್ ಮ್ಯಾನ್ ಶ್ರೀಶ ಭಟ್, ರೋ. ಮಹಮ್ಮದ್ ನಿಯಾಝ್, ರೋ. ಸುಧಾಕರ್ ಕೆ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು ರೋ. ಸಂತೋಷ್ ಪಡುಬಿದ್ರಿ ವಂದಿಸಿದರು.