ಮುಂಡ್ಕೂರು : ಕುಲಾಲ ಸಂಘ (ರಿ.) ನಾನಿಲ್ತಾರ್ ಮುಂಡ್ಕೂರು ಇದರ ಯುವ ವೇದಿಕೆ ಆಶ್ರಯದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾದ ದಿ. ಸುಂದರ ಮೂಲ್ಯ ಕ್ರೀಡಾಂಗಣದಲ್ಲಿ ಕುಲಾಲ ಬಾಂಧವರಿಗಾಗಿ ಕುಲಾಲ ಕ್ರೀಡಾಕೂಟ ಅಯೋಜಿಸಲಾಗಿತ್ತು.
ಸಂಘದ ಅಧ್ಯಕ್ಷ ಕುಶ ಆರ್ ಮೂಲ್ಯ ಅಧ್ಯಕ್ಷತೆಯಲ್ಲಿ ಕುತ್ಯಾರುವಿನ ಖ್ಯಾತ ನ್ಯಾಯವಾದಿ ಜಗದೀಶ್ ಮೂಲ್ಯ ಉದ್ಘಾಟಿಸಿದರು.
ಸಂಘದ ಅಧ್ಯಕ್ಷ ಕುಶ ಆರ್ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಲವ ಆರ್ ಮೂಲ್ಯ ಇನ್ನ, ಸದಾನಂದ ಮೂಲ್ಯ ಕುವೈಟ್, ಸಂಘದ ಉಪಾಧ್ಯಕ್ಷರಾದ ಬೊಗ್ಗು ಮೂಲ್ಯ ಬೇಲಾಡಿ, ಜಯರಾಮ ಕುಲಾಲ್, ಸಂಘದ ಮಾಜಿ ಅಧ್ಯಕ್ಷರಾದ ಮಂಜಪ್ಪ ಮೂಲ್ಯ, ಗುತ್ತಿಗೆದಾರರಾದ ಬೊಗ್ಗು ಮೂಲ್ಯ ಬೆಳ್ಮಣ್, ಬಿ ವಾರಿಜ, ಮಹಿಳಾ ಘಟಕದ ಅಧ್ಯಕ್ಷೆ ಪ್ರತಿಮಾ, ಯುವ ವೇದಿಕೆ ಅಧ್ಯಕ್ಷರಾದ ದೀಪಕ್ ಕುಲಾಲ್ ಬೆಳ್ಮಣ್, ಕಾರ್ಯದರ್ಶಿ ಸಂತೋಷ್, ಉಪಾಧ್ಯಕ್ಷ ಗಿರೀಶ್ ಬೆಳ್ಮಣ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ದಿನೇಶ್ ಕುಲಾಲ್ ಸ್ವಾಗತಿಸಿದರು. ಆಶಾ ವರದರಾಜ್ , ಕುಮಾರಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕರಾದ ಶ್ರೀಕಾಂತ್ ಕುಲಾಲ್ ವಂದಿಸಿದರು.