ಶಿರ್ವ : ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಮಿತಿ (ರಿ.) ಶಿರ್ವ ಇದರ ವಿಶೇಷ ಮಹಾ ಸಭೆ ಅಧ್ಯಕ್ಷರಾದ ದೇವಿಪ್ರಸಾದ್ ಪೂಜಾರಿ ಮಾಣಿಬೆಟ್ಟು ಅಧ್ಯಕ್ಷತೆಯಲ್ಲಿ ಇಂದು ಜರಗಿತು. ಸಭೆಯಲ್ಲಿ 2023 ರಿಂದ 2025 ಮೂರು ವರ್ಷದ ನೂತನ ಆಡಳಿತ ಮಂಡಳಿ ರಚನೆ ಸರ್ವ ಸದಸ್ಯರ ಬಹುಮತದೊಂದಿಗೆ ನಿರ್ಣಯಿಸಲಾಯಿತು.
ನೂತನ ಅಧ್ಯಕ್ಷರಾಗಿ ಗೋಪಾಲ ಪೂಜಾರಿ ಸೊರ್ಪು, ಉಪಾಧ್ಯಕ್ಷರಾಗಿ ರಮೇಶ್ ಬಂಗೇರ,
ಲಕ್ಷ್ಮಣ್ ಪೂಜಾರಿ ಮಾಣಿಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ವೀರೇಂದ್ರ ಪೂಜಾರಿ,
ಜೊತೆ ಕಾರ್ಯದರ್ಶಿಯಾಗಿ ರಮೇಶ್ ಪೂಜಾರಿ ಶಿರ್ವ, ಕೋಶಾಧಿಕಾರಿಯಾಗಿ ಸುಕೇಶ್ ಪೂಜಾರಿ ವಳದೂರು, ಭಜನಾ ಸಂಚಾಲಕರಾಗಿ ಭಾಸ್ಕರ್ ಪೂಜಾರಿ ಸೋರ್ಕಳ ಆಯ್ಕೆಯಾದರು.