ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜೆಸಿಐ ಶಂಕರಪುರ ಜಾಸ್ಮಿನ್ - ಕ್ರಿಸ್ಮಸ್ ಸಂಭ್ರಮಾಚರಣೆ

Posted On: 06-12-2022 09:35PM

ಶಂಕರಪುರ : ಜೆಸಿಐ ಶಂಕರಪುರ ಜಾಸ್ಮಿನ್ ಇದರ ವತಿಯಿಂದ ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ಜೆಸಿ ಭವನ ಶಂಕರಪುರದಲ್ಲಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ವಲಯ 15 ರ ವಲಯಧ್ಯಕ್ಷರಾದ ರಾಯನ್ ಉದಯ್ ಕ್ರಾಸ್ತ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಮಾಲಿನಿ ಇನ್ನಂಜೆ ವಹಿಸಿದ್ದರು. ರಾಯನ್ ಮಥಾಯಸ್, ನಿಕಟಪೂರ್ವ ಅಧ್ಯಕ್ಷ ಜಗದೀಶ್ ಅಮೀನ್, ಕಾರ್ಯಕ್ರಮ ಸಂಯೋಜಕರಾದ ಪ್ರಸಿಲ್ಲ ಕ್ವಾಡ್ರಸ್, ಜೇಸಿರೆಟ್ ಅಧ್ಯಕ್ಷೆ ಜಯಶ್ರೀ ನವೀನ್ ಅಮೀನ್, ಪೂರ್ವ ವಲಯ ಉಪಾಧ್ಯಕ್ಷ ಸಂತೋಷ್ ಕುಮಾರ್, ಜೆಸಿ ಶಂಕರಪುರದ ಪೂರ್ವ ಅಧ್ಯಕ್ಷರುಗಳಾದ ನವೀನ್ ಅಮೀನ್, ಅಲ್ವಿನ್ ಮೆನೇಜಸ್, ಅನಿತಾ ಮಾಥಾಯಸ್, ಸೀಮಾ ಮಾರ್ಗರೆಟ್ ಡಿಸೋಜ, ಸಂತ ಕ್ಲಾಸ್ ಆಗಿ ಸಿಲ್ವಿಯಾ ಕಾಸ್ಟಲಿನೋ, ಹರೀಶ್ ಕುಲಾಲ್ ಉಪಸ್ಥಿತರಿದ್ದರು.