ರೋಟರಿ ಶಂಕರಪುರದ ವತಿಯಿಂದ ಕ್ರಿಸ್ಮಸ್ ಆಚರಣೆ ; ಕುಟುಂಬ ಸಹ ಮಿಲನ ಕಾರ್ಯಕ್ರಮ
Posted On:
07-12-2022 09:25PM
ಶಂಕರಪುರ : ರೋಟರಿ ಶಂಕರಪುರದ ವತಿಯಿಂದ ಕ್ರಿಸ್ಮಸ್ ಆಚರಣೆ ಹಾಗೂ ಕುಟುಂಬ ಸಹ ಮಿಲನ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಿಎಸ್ಐ ಇಮ್ಯಾನುವೆಲ್ ದೇವಾಲಯ ಪಾದೂರು ಇಲ್ಲಿನ ಧರ್ಮ ಗುರುಗಳಾದ ರೆ| ರೇಶ್ಮ ರವಿಕಲಾ ಅಮ್ಮನ್ನ ಮಾತನಾಡಿ ನಾವು ಇತರರ ಬಾಳಿಗೆ ಬೆಳಕಾಗಿ ಈ ಸಮಾಜದ ಒಳಿತಿಗಾಗಿ ಶ್ರಮಿಸುವಂತಾಗಬೇಕು ಮಾನವೀಯ ನೆಲೆಯಲ್ಲಿ ಜೀವಿಸಿ ನಾವು ಸಮಾಜಕ್ಕೆ ಶ್ರೇಷ್ಠ ಉಡುಗೊರೆಯಾಗಬೇಕು ಎಂಬ ಸಂದೇಶವನ್ನು ನೀಡಿ ನೂತನ ವರ್ಷಕ್ಕೆ ಶುಭ ಕೋರಿದರು.
ಕ್ಲಬ್ ಸರ್ವಿಸ್ ಡೈರೆಕ್ಟರ್ ಫ್ರಾನ್ಸಿಸ್ ಡೇಸಾ,
ಸಂತ ಕ್ಲಾಸ್ ವೇಷಧಾರಿಯಾಗಿ ಚಂದ್ರ ಪೂಜಾರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಗೀತ ಮಂಡಳಿ ಸದಸ್ಯರಾದ ರೂಬೆನ್ ಕೊಲಿನೋ ಅಮ್ಮನ್ನ,ಶರ್ಲಿ ಗ್ಲೆನೀಟ, ಸ್ಟಾನ್ಸನ್ ಗ್ಲೇನಿಶ್, ಕ್ರಿಸ್ಮಸ್ ಹಾಡುಗಳನ್ನು ಹಾಡುವುದರ ಮೂಲಕ ಮನರಂಜನೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಗಳನ್ನು ಮಾಡಿ ಬಹುಮಾನ ನೀಡಲಾಯಿತು.
ಏಡ್ವಿನ್ ನೋಯೆಲ್ ಡಿಸಿಲ್ವ ಪ್ರಾರ್ಥಿಸಿದರು. ಅಧ್ಯಕ್ಷರಾದ ಗ್ಲಾಡ್ಸನ್ ಕುಂದರ್ ಸ್ವಾಗತಿಸಿದರು.
ಮಾಲಿನಿ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.
ಫ್ಲೇವಿಯಾ ಮೆನೆಜಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಿಲ್ವಿಯ ಕಸ್ಟಲೀನೋ ವಂದಿಸಿದರು.