ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮಂಗಳೂರು : ಜಾಗತಿಕ ಛಾಯಾಗ್ರಹಣ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ದಯಾನಂದ ಕುಕ್ಕಾಜೆ

Posted On: 08-12-2022 10:52PM

ಮಂಗಳೂರು : ಗ್ಲೋಬಲ್ ಟ್ಯಾಲೆಂಟ್ ಸರ್ಚ್ ಫರ್ಮ್ ಇನ್ನೋವೈಜ್ ಆರ್ಟ್ಸ್ ಅಂಡ್ ಕಲ್ಚರ್ ಆಯೋಜಿಸಿದ್ದ 2022 ರ ಜಾಗತಿಕ ಛಾಯಾಗ್ರಹಣ ಸ್ಪರ್ಧೆಯ ಸೀಸನ್ 3ರಲ್ಲಿ, ಖ್ಯಾತ ಪೋಟೋ ಜರ್ನಲಿಸ್ಟ್ ದಯಾನಂದ ಕುಕ್ಕಾಜೆ ಅವರು ’ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ದಯಾನಂದ ಕುಕ್ಕಾಜೆ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಪದಕ ನೀಡಿ ಗೌರವಿಸಲಾಗಿದ್ದು. ಈ ಹಿಂದೆ ಇವರು ಅತ್ಯುತ್ತಮ ಆಕ್ಷನ್ ಛಾಯಾಗ್ರಹಣ ಪ್ರಶಸ್ತಿ ಮತ್ತು ಅತ್ಯುತ್ತಮ ಕ್ಯಾಂಡಿಡ್ ಛಾಯಾಗ್ರಹಣ ಪ್ರಶಸ್ತಿ ಪಡೆದಿದ್ದರು.

ಗ್ಲೋಬಲ್ ಫೋಟೋಗ್ರಫಿ ಕಾಂಟೆಸ್ಟ್ 2022 ರ ಸೀಸನ್ -3 ಅನ್ನು ಭಾರತದ ಛಾಯಾಗ್ರಾಹಕರು ಮತ್ತು ಹಲವಾರು  ದೇಶಗಳ ಎನ್‌ಆರ್‌ಐಗಳ ನಡುವೆ ನಡೆಸಲಾಗಿತ್ತು. ಕುಕ್ಕಾಜೆ ಅವರು 12ಕ್ಕೂ ಹೆಚ್ಚು ಛಾಯಾಚಿತ್ರ ಪ್ರದರ್ಶನಗಳನ್ನು ಆಯೋಜಿಸಿದ್ದು ತಮ್ಮ ಛಾಯಾಗ್ರಹಣ ಕೌಶಲ್ಯವನ್ನು ಪ್ರದರ್ಶಿಸಲು ಆರಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾರೆ.