ಕುತ್ಯಾರು : ಆನೆಗುಂದಿ ಸೂರ್ಯ ಚೈತನ್ಯ ಹೈಸ್ಕೂಲ್ ನಲ್ಲಿ ಜೆಇ ಲಸಿಕಾ ಅಭಿಯಾನ ಉದ್ಘಾಟನೆ
Posted On:
09-12-2022 10:55PM
ಕುತ್ಯಾರು : ಕಾಪು ತಾಲೂಕಿನ ಆನೆಗುಂದಿ ಶ್ರೀ ಸರಸ್ವತೀ ಎಜುಕೇಷನ್ ಟ್ರಸ್ಟ್ ನ ಅಧೀನ ಸಂಸ್ಥೆಯಾದ ಕುತ್ಯಾರು ಸೂರ್ಯಚೈತನ್ಯ ಹೈಸ್ಕೂಲಿನಲ್ಲಿ ಜಪಾನೀಸ್ ಎನ್ ಸೆಫಲೈಟಿಸ್ (ಜೆಇ) ಲಸಿಕಾ ಅಭಿಯಾನದ ಉದ್ಘಾಟನೆಯನ್ನು ಶಿರ್ವ ಪ್ರಾಥಮಿಕ ಅರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಸುಬ್ರಮಣ್ಯ ರಾವ್ ನೆರವೇರಿಸಿದರು.
ಮೆದುಳು ಜ್ವರದ ವಿರುದ್ಧ ಹೋರಾಡಲು ಜೆಇ ಲಸಿಕಾಕರಣವನ್ನು ಹಾಕಿಸಿಕೊಳ್ಳಲು ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳ ಬಗ್ಗೆ ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಗುರುದತ್ತ ಸೋಮಯಾಜಿ, ಆರೋಗ್ಯ ಇಲಾಖೆಯ ಸಿಬ್ಬಂದಿವರ್ಗ, ಸ್ಥಳೀಯ ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಹ ಶಿಕ್ಷಕ ಸುಧೀರ್ ಕೈರಬೆಟ್ಟು ನಿರೂಪಿಸಿದರು.
ಸಹಾಯಕ ಪ್ರಾಂಶುಪಾಲೆ ಸಂಗೀತಾ ವಂದಿಸಿದರು.