ಕಟೀಲು : ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಹಾಗೂ ಕಟೀಲು ಶಿಕ್ಷಣ ಸಂಸ್ಥೆಗಳ ಹಿರಿಯ ವಿದ್ಯಾರ್ಥಿ ಸಂತೋಷ ಆಳ್ವ ಅವರು ನಾಟಕ ಪರಂಪರೆ ಹಾಗೂ ಪ್ರಯೋಗ ವಿಷಯದಲ್ಲಿ ಡಾ. ಮಾಧವ ಪೆರಾಜೆ ಇವರ ಮಾರ್ಗದರ್ಶನದಲ್ಲಿ ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಇಲ್ಲಿಗೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿಯನ್ನು ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಪ್ರದಾನಿಸಿದರು.
ಸಂತೋಷ್ ಆಳ್ವ ಇವರು ಕನ್ನಡ ಎಂಎ, ಇಂಗ್ಲಿಷ್ ಎಂಎ, ಬಿಎಡ್, ಎಂಎಡ್, ಎಂಫಿಲ್, ಪಿಎಚ್ ಡಿ ಪದವಿಗಳನ್ನು ಪಡೆದಿರುತ್ತಾರೆ.