ಪಲಿಮಾರು : ಕೈ ತೋಟ ಕ್ರಾಂತಿಯಾಗಲಿ ಕಾರ್ಯಕ್ರಮ
Posted On:
11-12-2022 07:08PM
ಪಲಿಮಾರು : ಹೊೖಗೆ ಫ್ರೆಂಡ್ಸ್ ಹೊೖಗೆ (ರಿ.) ಪಲಿಮಾರು ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಇವರ ಸಹಯೋಗದಲ್ಲಿ ಪಲಿಮಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಕೈ ತೋಟ ಕ್ರಾಂತಿಯಾಗಲಿ ಕಾರ್ಯಕ್ರಮದಡಿ ವಿಷಮುಕ್ತ ಆಹಾರ ನಮ್ಮದಾಗಲಿ ಎಂಬ ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪರು ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹರಿಕೃಷ್ಣ ಕಾಮತ್ ಮಾತನಾಡಿ ನಾವು ಸೇವಿಸುವ ಪ್ರತಿಯೊಂದು ಆಹಾರವು ಇಂದು ರಾಸಾಯನಿಕ ಪದಾರ್ಥಗಳಿಂದ ತಯಾರಾಗುತ್ತಿದ್ದು ಕನಿಷ್ಠ ನಾವು ನಮಗೆ ಬೇಕಾದ ತರಕಾರಿಯನ್ನಾದರೂ ನಮ್ಮ ಮನೆಯಂಗಳದಲ್ಲಿ ಸಾವಯವ ಪದ್ದತಿಯಲ್ಲಿ ಬೆಳೆದು ಆರೋಗ್ಯ ಕಾಪಾಡಿಕೊಳ್ಳುವ. ಇಲ್ಲವಾದಲ್ಲಿ ಮುಂದೊಂದು ದಿನ ಕ್ಯಾನ್ಸರ್ ನಂತಹ ಭೀಕರ ಕಾಯಿಲೆಗಳಿಗೆ ತುತ್ತಾಗಬಹುದು ಮತ್ತು ಸಾವಯವ ಪದ್ದತಿಯಲ್ಲಿ ಯಾವ ರೀತಿ ಕೈ ತೋಟ ಮಾಡಬಹುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಪಲಿಮಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಗಾಯತ್ರಿ ಡಿ ಪ್ರಭು, ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ, ಉಪಾಧ್ಯಕ್ಷ ರಾದ ರಾಜೇಂದ್ರ ಬಲ್ಲಾಳ್, ಗುರುರಾಜ್ ಭಟ್, ಆಶಾ, ದೀಪಕ್ ಕಾಂಜರ್ ಕಟ್ಟೆ, ವಸಂತ್ ಸನಿಲ್, ಹೊೖಗೆ ಫ್ರೆಂಡ್ಸ್ ಹೊೖಗೆ (ರಿ) ಪಲಿಮಾರ್ ಇದರ ಅಧ್ಯಕ್ಷರಾದ ರಾಘವೇಂದ್ರ ಜೆ ಸುವರ್ಣ, ಕಾರ್ಯದರ್ಶಿ ಸತೀಶ್ ಕುಮಾರ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸಾವಯವ ಕೃಷಿಯ ಬಗ್ಗೆ ಮೂರು ಕೈಪಿಡಿಯನ್ನು ಪರಿಚಯಿಸಿ ಭಾಗವಹಿಸಿದ ಆಸಕ್ತರಿಗೆ ತರಕಾರಿ ಬೀಜ ಹಾಗೂ ಗಿಡಗಳನ್ನು ಉಚಿತವಾಗಿ ನೀಡಲಾಯಿತು.
ಅರುಣ್ ಎಸ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.