ಪಡುಬಿದ್ರಿ : ಹೆಜ್ಜೇನು ದಾಳಿ - ಓರ್ವ ಮೃತ ; ಇನ್ನೋರ್ವ ಗಂಭೀರ
Posted On:
15-12-2022 08:06PM
ಪಡುಬಿದ್ರಿ : ಇಲ್ಲಿನ ಬೀಚ್ ಬಳಿ ಹೆಜ್ಜೇನು ದಾಳಿಯಿಂದ ಒರ್ವ ವ್ಯಕ್ತಿ ಮೃತಪಟ್ಟರು ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದು ಹಲವರು ಗಾಯಗೊಂಡಿರುವ ಘಟನೆ ಇಂದು ನಡೆದಿದೆ.
ಮೃತ ವ್ಯಕ್ತಿ ಸ್ಥಳೀಯ ನಿವಾಸಿ ವಾಸುದೇವ ಡಿ. ಸಾಲ್ಯಾನ್ (65) ರಕ್ಷಣೆಗಾಗಿ ಸಮುದ್ರದ ನೀರಿಗೆ ಹಾರಿದವರು ಮತ್ತೆ ಮೇಲೆ ಬರಲಾಗದೆ ಅಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ. ಚಂದ್ರಶೇಖರ (65) ಗಂಭೀರ ಗಾಯಗೊಂಡಿದ್ದು ಅವರನ್ನು ತಕ್ಷಣ ಪಡುಬಿದ್ರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳೀಯವಾಗಿ ಹಲವರ ಮೇಲೆ ದಾಳಿ ನಡೆಯಿತಾದರೂ ಅವರು ಓಡಿ ತಪ್ಪಿಸಿಕೊಂಡಿದ್ದಾರೆ.
ಬೀಚ್ ಬಳಿಯ ಆಂಗ್ಲ ಮಾಧ್ಯಮ ಶಾಲೆ ಬಿಟ್ಟು ಶಾಲಾ ವಾಹನ ಮಕ್ಕಳನ್ನು ಹೇರಿಕೊಂಡು ಹೋಗಿದ್ದರಾದರೂ ನಡೆದುಕೊಂಡು ಹೋಗುವ ಮಕ್ಕಳು ಇನ್ನೇನು ಆ ಪ್ರದೇಶಕ್ಕೆ ಬರುತ್ತಾರೆ ಎನ್ನುವಾಗ ಸಾರ್ವಜನಿಕರು ಬೊಬ್ಬೆ ಹಾಕಿ ಮಕ್ಕಳನ್ನು ತಡೆದ್ದರಿಂದ ಬಾರೀ ಅನಾಹುತ ತಪ್ಪಿದಂತ್ತಾಗಿದೆ. ಭಾನುವಾರವಾಗಿದ್ದರೆ ಈ ಬೀಚ್ ಪ್ರದೇಶದಲ್ಲಿ ಬಾರೀ ಜನ ಸಂದಣಿ ಇರುತ್ತಿದ್ದು ಮತ್ತಷ್ಟು ದುರಂತ ಸಂಬವಿಸುತ್ತಿತ್ತು ಎನ್ನುತ್ತಾರೆ ಸ್ಥಳೀಯರು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಯವರು ಆ ಹೆಜ್ಜೇನು ಹಿಂಡನ್ನು ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.