ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಸಂತ ಮೇರಿ ಮಹಾವಿದ್ಯಾಲಯ ಶಿರ್ವದಲ್ಲಿ ‘ರಾಷ್ಟ್ರೀಯ ಭೂ-ಯುವಸೇನಾ ತರಬೇತಿ ಶಿಬಿರ'

Posted On: 16-12-2022 11:09AM

ಶಿರ್ವ : ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ ಕೆ ಸಿಂಗ್ ಮಾರ್ಗದರ್ಶನದಲ್ಲಿ ಒಂದು ದಿನದ ಶಸ್ತ್ರ ತರಬೇತಿ ಶಿಬಿರವು ಏರ್ಪಡಿಸಲಾಯಿತು. ಶಸ್ತ್ರಾಸ್ತ್ರ ಕಲಿಕೆ ಒಂದು ಸುವರ್ಣ ಅವಕಾಶ , ಇದು ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ ಕೆಡೆಟ್ಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ!ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಕಾರ್ಕಳದ ಪೊಲೀಸ್ ಫೈರ್ ರೇಂಜ್ ಅಲ್ಲಿ ನಡೆದಂತ ಫೈರಿಂಗ್ ತರಬೇತಿಯಲ್ಲಿ ಭಾಗವಹಿಸಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ ಕಂಪನಿ ಸಾರ್ಜೆಂಟ್ ಕ್ವಾಟರ್ ಮಾಸ್ಟರ್ ಆಶಿಶ್ ಪ್ರಸಾದ್, ಕಾರ್ಪೊರಲ್ ರಿಯಾ ಸೇರಿನಾ ಡಿಸೋಜಾ ,ಕ್ಯಾಡೆಟ್ ಗಳಾದ ಪೂಜಾ, ಹುಳಿದ್ರ ಖುಷಿ, ಲಾಯ್ ವಿನ್ಸ್ಟನ್ ಫರ್ನಾಂಡಿಸ್ ರವರನ್ನು ಅಭಿನಂದಿಸಲಾಯಿತು. ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ರವರು ಶಸ್ತ್ರಾಸ್ತ್ರವನ್ನು ಹೇಗೆ ನಿರ್ವಹಣೆ ಮಾಡಬಹುದೆಂದು ಪ್ರತಿಯೊಬ್ಬ ಕ್ಯಾಡೆಟ್‍ಗಳು ಪ್ರತ್ಯಕ್ಷವಾಗಿ ಅನುಭವ ಪಡೆದುಕೊಳ್ಳುವುದು ಅತೀ ಅಗತ್ಯ, ಮುಂದೆ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ಹಾಗೂ ವಿವಿಧ ಉದ್ಯೋಗಾವಕಾಶಗಳಿಗೆ ಇದು ಸಹಕಾರಿ ಎಂದು ಮಾತನಾಡಿದರು. ಲ್ಯಾನ್ಸ್ ಕಾರ್ಪೋರಲ್ ಶೆಟ್ಟಿಗಾರ ಹೇಮಶ್ರೀ ಸುದರ್ಶನ್ ತರಬೇತಿನ ಮುಖ್ಯ ಉದ್ದೇಶ ಮತ್ತು ಪ್ರಯೋಜನವನ್ನು ತಿಳಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಉಡುಪಿ ಘಟಕದ ಬಿಎಚ್‌ಎಂ ಮಹೇಂದ್ರ ಲಿಂಬು, ಹವಾಲ್ದಾರ್ ಪೆಶಲ್ ಬಿಡಿಆರ್ ತಮಾಂಗ್, ಭೂ-ಯುವ ಸೇನಾದಳದ ಕೆಡೆಟ್‍ಗಳನ್ನು ಎನ್.ಸಿ.ಸಿ. ಪರೀಕ್ಷೆಗಳಿಗೆ ಸಜ್ಜುಗೊಳಿಸುವ ಜೊತೆಗೆ ಕವಾಯತು, ಭೂಪಟ ಅಧ್ಯಯನ, ಫೈರಿಂಗ್ ಅಣಕುಯುದ್ಧ, ಶಸ್ತ್ರಗಳನ್ನು ಹೇಗೆ ನಿರ್ವಹಣೆ ಮಾಡುವುದು ಎಂಬುದನ್ನು ಪ್ರಾತ್ಯಕ್ಷಿಕೆಯಮೂಲಕ ತಿಳಿಸಿ ತರಬೇತಿ ನಡೆಸಿಕೊಟ್ಟರು. ಸೀನಿಯರ್ ಅಂಡರ್ ಆಫೀಸರ್ ಮೋಹಿತ್ ಎನ್ ಸಾಲಿಯಾನ್ ಜೂನಿಯರ್ ಅಂಡರ್ ಆಫೀಸರ್ ಧೀರಜ್ ಆಚಾರ್ಯ, ಲೋಬೋ ಆನ್ ರಿಯಾ ನೇವಿಲ್, ಸರ್ಜೆಂಟ್ ದೀಪಕ್, ರಿಯಾನ್ ಡಿಸೋಜಾ, ಕಾರ್ಪೋರಲ್ ಮಂಜುನಾಥ ಅಮರಾವತಿ, ಕ್ಯಾಡೆಟ್ ಅನುಪ್ ನಾಯಕ್ ಮತ್ತು ಅಲಿಸ್ಟಾರ್ ಸುಜಯ್ ಡಿಸೋಜ ಸಹಕರಿಸಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿರ್ದೇಶಕಿ ಯಶೋದ, ಎಲ್ಲಾ ಕ್ಯಾಡೆಟ್ಗಳು ಉಪಸ್ಥಿತರಿದ್ದರು. ವಾಣಿ ಯು ಸಾಲಿಯಾನ್ ಸ್ವಾಗತಿಸಿ, ಲ್ಯಾನ್ಸ್ ಕಾರ್ಪೋರಲ್ ಅನೀಶ್ ಭಟ್ ವಂದಿಸಿದರು. ಸೋನಾಲಿ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.