ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗರ ರಕ್ಷಣೆ

Posted On: 16-12-2022 12:25PM

ಕಾಪು : ಕಾಪು ಲೈಟ್ ಹೌಸ್ ಬೀಚ್ ಬಳಿ ಸಮುದ್ರದಲ್ಲಿ ನೀರು ಪಾಲಾಗುತ್ತಿದ್ದ ಹೈದರಾಬಾದ್ ಮೂಲದ ಇಬ್ಬರು ಪ್ರವಾಸಿಗರನ್ನು ಕಾಪು ಬೀಚ್‌ನ ಲೈಫ್ ಗಾರ್ಡ್‌ಗಳು ರಕ್ಷಿಸಿದ್ದಾರೆ.

ಹೈದರಾಬಾದ್‌ನ ನವೀನ್ (25) ಮತ್ತು ಸಾಯಿತೇಜ (27) ಕಾಪು ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ ವೇಳೆ ಲೈಫ್ ಗಾರ್ಡ್‌ಗಳಿಂದ ಜೀವದಾನ ಪಡೆದ ಪ್ರವಾಸಿಗರು.

ಗುರುವಾರ ಸಂಜೆ ಕಾಪು ಬೀಚ್‌ಗೆ ಬಂದಿದ್ದ ಹೈದರಾಬಾದ್‌ನ ಇಬ್ಬರು ಯುವಕರು ಮತ್ತು ಓರ್ವ ಯುವತಿ ಸಮುದ್ರ ಸ್ನಾನಕ್ಕೆ ಇಳಿದಿದ್ದರು. ಈ ಸಂದರ್ಭ ಅವರನ್ನು ಲೈಫ್ ಗಾರ್ಡ್‌ಗಳು ಎಚ್ಚರಿಕೆ ನೀಡಿ ಅವರನ್ನು ನೀರಿನಿಂದ ಮೇಲಕ್ಕೆ ಕಳುಹಿಸಿದ್ದರು. ಎರಡು ಮೂರು ಸಾರಿ ಹೇಳಿದ್ದರೂ ನಿರ್ಲಕ್ಷಿಸಿ ಲೈಟ್‌ಹೌಸ್‌ನ ಬಂಡೆಯ ಮೇಲೆ ಹೋಗಿದ್ದ ಯುವಕರು ಕಲ್ಲಿನಲ್ಲಿ ಜಾರುತ್ತಾ ಸಮುದ್ರದೊಳಗೆ ಬಿದ್ದಿದ್ದರು.

ಇದನ್ನು ಗಮನಿಸಿದ ಲೈಫ್ ಗಾರ್ಡ್‌ಗಳಾದ ಲಕ್ಷ್ಮಣ್, ಸಂದೇಶ್, ಸುಜಿನ್ ಹಾಗೂ ಬೋಟ್ ರೈಡರ್‍ಸ್ ತಂಡದ ಹುಸೇನ್ ಮತ್ತು ಕಾರ್ತಿಕ್ ಸಮುದ್ರಕ್ಕೆ ತೆರಳಿ ನೀರು ಪಾಲಾಗುತ್ತಿದ್ದ ಯುವಕರನ್ನು ರಕ್ಷಿಸಿದ್ದಾರೆ. ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಯುವಕರನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.