ಶಿರ್ವ : ಹದಿನೆಂಟು ವಯಸ್ಸಾಗದ ಕೆಳ ವಯಸ್ಸಿನ ಮಕ್ಕಳಿಗೆ ದ್ವಿ ಚಕ್ರ ವಾಹನ ಹಾಗೂ ಇತರ ವಾಹನ ನೀಡದೆ ಸಂಪೂರ್ಣ ವಾಹನ ಚಾಲನೆ ಪರವಾನಿಗೆ ಪಡೆದ ಮೇಲೆ ವಾಹನವನ್ನು ರಸ್ತೆಗೆ ಇಳಿಸಬೇಕು ಹೆತ್ತವರು ಜಾಗ್ರತೆ ವಹಿಸಿ ಮಕ್ಕಳನ್ನು ಅಪಾಯದಿಂದ ರಕ್ಷಿಸಿಕೊಳ್ಳಿ. ಅದಲ್ಲದೆ ಮಾದಕ ದ್ರವ್ಯಗಳ ಕುರಿತು ಎಚ್ಚರಿಕೆಯಿಂದಿದ್ದು ಎಲ್ಲಾ ವಾಹನ ಮಾಲಕರು ತನ್ನ ವಾಹನದ ನಾಲ್ಕು ಬಗೆಯ ದಾಖಲೆಯನ್ನು ವಾಹನದಲ್ಲಿರಿಸಿ ತಪಾಸಣೆ ಸಮಯದಲ್ಲಿ ಸಾರ್ವಜನಿಕರು ಸಹಕರಿಸಬೇಕು ಮನೆಯಿಂದ ಹೊರಗೆ ಹೋಗುವಾಗ ಮನೆಯ ಸುರಕ್ಷತೆಯಿಂದ ಕಾಪಾಡಬೇಕು ಅಪರಾಧ ಆದಾಗ ಪೊಲೀಸರನ್ನು ಕೂಡಲೇ ಸಂಪರ್ಕಿಸಬೇಕು ನಾವೂ ಸದಾ ನಿಮ್ಮ ಸೇವೆಯಲ್ಲಿ ಇರುತ್ತೇವೆ ಎಂದು ಕಳತ್ತೂರು ಚಂದ್ರನಗರದ ಬಟರ್ ಫ್ಲೈ ಗೆಸ್ಟ್ ಹೌಸ್ ಸಭಾಂಗಣದಲ್ಲಿ ಶಿರ್ವ ಪೊಲೀಸ್ ಠಾಣಾ ವತಿಯಿಂದ ನಡೆದ ಅಪರಾಧ ಮಾಸ ತಡೆ ಮಾಸಚರಣೆ ಸಭೆಯಲ್ಲಿ ಶಿರ್ವ ಠಾಣಾಧಿಕಾರಿ ರಾಘವೇಂದ್ರ ಮಾತನಾಡಿ ಸಾರ್ವಜನಿಕರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರೊಬೆಷನರಿ ಎಸ್.ಐ ಶಶಿಧರ್, ಎ.ಎಸ್.ಐ ಶ್ರೀಧರ್ ಕೆ.ಜೆ, ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷರಾದ ದಿವಾಕರ ಬಿ ಶೆಟ್ಟಿ, ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಫಾರೂಕ್ ಚಂದ್ರನಗರ, ಸಂಚಾಲಕರಾದ ದಿವಾಕರ ಡಿ ಶೆಟ್ಟಿ, ಬಟರ್ ಫ್ಲೈ ಆಡಳಿತ ನಿರ್ದೇಶಕರಾದ ಹಾಜಿ ಕೆ.ಉಮ್ಮರಬ್ಬ, ಚಂದ್ರನಗರ ಪೊಲೀಸ್ ಸಿಬ್ಬಂದಿಗಳಾದ ಪ್ರಸಾದ್, ಬೀಟ್ ಪೊಲೀಸ್ ಅನ್ವರ್ ಹಾಗೂ ಗ್ರಾಮದ ಸದಸ್ಯರು ಉಪಸ್ಥಿತರಿದ್ದರು.