ಕುತ್ಯಾರು ಸೂರ್ಯಚೈತನ್ಯ ಹೈಸ್ಕೂಲ್ ಕ್ರೀಡಾಕೂಟ
Posted On:
18-12-2022 03:52PM
ಕಾಪು : ಕುತ್ಯಾರು ಆನೆಗುಂದಿ ಶ್ರೀ ಸರಸ್ವತೀ ಎಜುಕೇಷನ್ ಟ್ರಸ್ಟ್‌ನ ಆಡಳಿತಕ್ಕೊಳಪಟ್ಟ ಸೂರ್ಯಚೈತನ್ಯ ಹೈಸ್ಕೂಲಿನ ವಾರ್ಷಿಕ ಕ್ರೀಡಾಕೂಟವು ಶನಿವಾರದಂದು ಆಡಳಿತ ಮಂಡಳಿ ಅಧ್ಯಕ್ಷ ಮೋಹನ್ ಕುಮಾರ್ ಬೆಳ್ಳೂರು ಅಧ್ಯಕ್ಷತೆಯಲ್ಲಿ ಜರುಗಿತು.
ಶಿರ್ವ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ರಾಘವೇಂದ್ರ ಸಿ. ಕ್ರೀಡಾಜ್ಯೋತಿ ಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ರೀಡೆಯಿಂದ ಶಿಸ್ತು, ಒಗ್ಗಟ್ಟು ಸಾಧ್ಯವಾಗುವುದು. ಪೊಲೀಸ್ ಮತ್ತು ಸೇನೆಯ ಸೇರ್ಪಡೆಗೆ ದೈಹಿಕ ಕ್ಷಮತೆ ಅತ್ಯಗತ್ಯ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಿ ಉನ್ನತ ಸಾಧನೆ ಮಾಡಬೇಕು ಎಂದು ಕರೆಯಿತ್ತರು.
ಠಾಣಾ ಎಎಸ್ಸೈ ಶಶಿಧರ್ ಕೆ, ಕಾರ್ಯದರ್ಶಿ ಗುರುರಾಜ್ ಕೆ.ಜೆ. ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನೆಯ ವಂದನೆ ಸ್ವೀಕರಿಸಿದರು. ಉಪಾಧ್ಯಕ್ಷ ವಿವೇಕ್ ಆಚಾರ್ಯ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.
ಗೌರವ ಸಲಹೆಗಾರ ವಿದ್ವಾನ್ ಶಂಭುದಾಸ ಗುರೂಜಿ, ಪ್ರಿನ್ಸಿಪಾಲ್ ಗುರುದತ್ತ ಸೋಮಯಾಜಿ, ಸಹಾಯಕ ಪ್ರಿನ್ಸಿಪಾಲ್ ಸಂಗೀತಾ, ಶಿಕ್ಷಕವೃಂದ,ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ಗುರುದತ್ತ ಸೋಮಯಾಜಿ ಸ್ವಾಗತಿಸಿದರು. ಸಹ ಶಿಕ್ಷಕಿ ರಮ್ಯಾ ಪ್ರಭು ನಿರೂಪಿಸಿ ಸಹ ಶಿಕ್ಷಕ ಮಂಜುನಾಥ್ ಶೇಟ್ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಆಚಾರ್ಯ ಕ್ರೀಡಾಕೂಟವನ್ನು ಸಂಘಟಿಸಿದರು.