ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಡಿಸೆಂಬರ್ 23 : ಕಾಪು ರಂಗತರಂಗ ತಂಡದ 16 ನೇ ನಾಟಕ 'ಬುಡೆದಿ' ಪ್ರಥಮ ಪ್ರದರ್ಶನ

Posted On: 20-12-2022 02:07PM

ಕಾಪು : ಇಲ್ಲಿನ ರಂಗತರಂಗ ಕಲಾವಿದರಿಂದ ಡಿಸೆಂಬರ್ 23 ಶುಕ್ರವಾರದಂದು ಕಾಪು ಹೊಸ ಮಾರಿಗುಡಿಯ ಮೈದಾನದಲ್ಲಿ ನೂತನ ಹದಿನಾರನೇ ನಾಟಕ 'ಬುಡೆದಿ' ಪ್ರದರ್ಶನ ಗೊಳ್ಳಲಿದೆ ಎಂದು ರಂಗತರಂಗ ಸಂಚಾಲಕರಾದ ಸಮಾಜ ರತ್ನ ಲೀಲಾಧರ ಶೆಟ್ಟಿ ಕರಂದಾಡಿ ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿದ್ದು ಉಚ್ಚಿಲ ನಿರ್ದೇಶನ, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಕಥೆ, ಪ್ರಸನ್ನ ಶೆಟ್ಟಿ ಬೈಲೂರು ಸಂಭಾಷಣೆ, ಶರತ್ ಉಚ್ಚಿಲ ಸಂಗೀತ ನಾಟಕಕ್ಕಿದೆ.

16ನೇ ನಾಟಕ ಬುಡೆದಿಯ ಪ್ರಥಮ ಪ್ರದರ್ಶನದ ಟಿಕೆಟನ್ನು ಒಟಿಟಿ ಬುಕ್ ಮೈ ಶೋ ಆ್ಯಪ್ ಮೂಲಕ ಕಾಯ್ದಿರಿಸಲು ಅವಕಾಶವಿದೆ ಎಂದು ತಿಳಿಸಿದರು. ಪ್ರಥಮ ಪ್ರದರ್ಶನದಲ್ಲಿ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಗುರ್ಮೆ ಸುರೇಶ್ ಶೆಟ್ಟಿ, ವಕೀಲರಾದ ಸಂಕಪ್ಪ, ಉದ್ಯಮಿ ರೋಹಿತ್ ಆಳ್ವ ಮೊದಲಾದವರು ಉಪಸ್ಥಿತರಿರುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶರತ್ ಉಚ್ಚಿಲ, ಸಂದೀಪ್ ಶೆಟ್ಟಿ ಮಾಣಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.