ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಅದಮಾರು ಪಿಪಿಸಿ ನೆನೆಪಿನಂಗಳ ಗುರುಶಿಷ್ಯರ ಸಮಾಗಮ - 2022

Posted On: 21-12-2022 11:07PM

ಈ ಗುರು ಶಿಷ್ಯ ಸಮಾವೇಶದಲ್ಲಿ ವಿದ್ಯಾರ್ಥಿಗಳಿಗೆ ಆಗ ಗುರುಗಳಾಗಿದ್ದ ಅದಮಾರು ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪೌಢಶಾಲೆ ಹಾಗೂ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿದ್ದ ಶಿಕ್ಷಕರಿಗೆ, ಉಪನ್ಯಾಸಕರಿಗೆ, ಸನ್ಮಾನಿಸುವ ಮೂಲಕ ಗುರುವಂದನೆ ಸಲ್ಲಿಸಿದರು. ನಿವೃತ್ತ ಪ್ರಾಂಶುಪಾಲರುಗಳಾದ ಬಿ. ಆರ್. ನಾಗರತ್ನ, ಎಂ. ಲಕ್ಷ್ಮೀ ನಾರಯಣ ರಾವ್, ರಮೇಶ ಹಂದೆ, ನಾರಾಯಣ ಹೆಬ್ಬಾರ್, ಎಂ ರಾಮಕೃಷ್ಣ ಪೈ, ಹಾಗೂ ನಿವೃತ್ತ ಉಪನ್ಯಾಸಕರಾದ ಏಕನಾಥ ಡೋಂಗ್ರೆ, ಹರಿಪ್ರಸಾದ್, ನಿವೃತ್ತ ಶಿಕ್ಷಕರಾದ ವೆಂಕಟರಾಜ ಸರಳಾಯ, ವಾದಿರಾಜ ತಂತಿ, ವಿಠಲ ದಾಸ್, ಜಯಶಂಕರ್, ರವಿ, ಶೆಟ್ಟಿ, ಹಾಗೂ ಮುಖ್ಯೋಪಾಧ್ಯಾಯರಾದ ಗಣಪತಿ ಭಟ್ ಸಂಧ್ಯಾ ಗಣಪತಿ ಭಟ್ ರನ್ನು ಸನ್ಮಾನಿಸಲಾಯಿತು. ತೀರಿಹೋದ ಗುರುಗಳಿಗೆ ಅವರ ಮನೆಯವರನ್ನು ಕರೆಸಿ ಅವರಿಗೂ ಗೌರವ ಸಲ್ಲಿಸಿದರು. ಶಿಕ್ಷಕೇತರ ಬಂಧುಗಳಾದ ನಾಗರತ್ನ ಕೆ. ವಸಂತ, ಸುಧಾಕರ ಅಮೀನ್, ಸುಧಾಕರ ಪೂಜಾರಿ, ಸದಾಶಿವ ಆಚಾರಿ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿತು

ಬಿ.ಆರ್. ನಾಗರತ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಸಂಜೀವ ನಾಯ್ಕ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪದ್ಮಜ, ಅಲ್ತಾಫ್, ಮಿಥುನ್ ಶೆಟ್ಟಿ, ಸಾಯಿ ಪ್ರಸಾದ್‌, ಜನೆಸ್‌ ಡಿಸಿಲ್ವ, ಶಾಲಿನಿ, ಪ್ರಶಾಂತ್ ಉಪಸ್ಥಿತರಿದ್ದರು.

ತಮ್ಮ ಹಿಂದಿನ ಶಾಲಾ ಜೀವನವನ್ನು ನೆನೆಪಿಸಿಕೊಂಡು ತಾವು ಕಲಿತ ತರಗತಿಯಲ್ಲೇ ಕುಳಿತು ಹಿಂದಿನ ನೆನಪುಗಳನ್ನು ಮೆಲುಕಿ ಹಾಕಿಕೊಂಡು ಆಗಿನ ಇವರ ಶಿಕ್ಷಕರಾದ ವಿಠಲದಾಸರಿಂದ ಎಲ್ಲಾ ಹಳೆವಿದ್ಯಾರ್ಥಿಗಳು ನೆನಪಿನಂಗಳದ ಸ್ಮರಣಿಕೆ ಪಡೆದುಕೊಂಡರು. ತಾವು ಕಲಿತ ಶಾಲೆಗೆ ನೆನಪಿನ ಕಾಣಿಕೆಯಾಗಿ ಕಾಲು ದೀಪವನ್ನು ಆದಮಾರು ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಸಂಜೀವ ನಾಯ್ಕರಿಗೆ ನೀಡಿದರು. ಎಲ್ಲಾ ಗುರುಗಳಿಗೂ ಊಟೋಪಚಾರದ ವ್ಯವಸ್ಥೆಯನ್ನು ಮಾಡಿದಲ್ಲದೆ ಎಲ್ಲಾ ಗುರುಗಳ ಆಶೀರ್ವಾದ ಪಡೆದುಕೊಂಡರು. ಹಳೆ ವಿದ್ಯಾರ್ಥಿ ಪ್ರಿಯ ಶೆಟ್ಟಿ ಸ್ವಾಗತಿಸಿದರು. ಸುಧಾಕರ ಕೋಟ್ಯಾನ್ ಧನ್ಯವಾದವಿತ್ತರು. ಸುಧೀರ್ ಶೆಟ್ಟಿ ಅದಮಾರು ಕಾರ್ಯಕ್ರಮ ನಿರೂಪಿಸಿದರು. ಒಟ್ಟು 45 ಮಂದಿ ಹಳೆ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.