ಕಟಪಾಡಿ : ಯಾವುದೇ ಕಾರ್ಯ ಪೂರ್ವತಯಾರಿಯಿಲ್ಲದೆ ಆಗದು. ಎಲ್ಲರ ಸಹಕಾರ ಅಗತ್ಯ. ಸಫಲತೆಯ ಮನೋಭಾವ ಇದ್ದಾಗ ಕಾರ್ಯ ಸಾಧ್ಯ. ಕಾಪು ತಾಲೂಕಿನ ೪ನೇ ಕನ್ನಡ ಸಾಹಿತ್ಯ ಸಮ್ಮೇನಕ್ಕೆ ತಾಲೂಕು ಅಧ್ಯಕ್ಷರು, ಸಮಿತಿ ಮತ್ತು ಶಾಲೆಯ ಅಧ್ಯಾಪಕ ವೃಂದದವರ ಪರಿಶ್ರಮವಿದೆ. ಮುಂದೆಯೂ ನಮ್ಮ ಸಂಸ್ಥೆಯ ಸಹಕಾರವಿದೆ ಎಂದು ಕಟಪಾಡಿ ಎಸ್ ವಿ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರು ಮತ್ತು ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಕೆ ಸತ್ಯೇಂದ್ರ ಪೈ ಹೇಳಿದರು.
ಅವರು ಶನಿವಾರ ಕಟಪಾಡಿ ಎಸ್ ವಿ ಎಸ್ ಪದವಿಪೂರ್ವ ಕಾಲೇಜಿನಲ್ಲಿ ಯಶಸ್ವಿಯಾಗಿ ಜರಗಿದ ಕಾಪು ತಾಲೂಕಿನ ೪ನೇ ಕನ್ನಡ ಸಾಹಿತ್ಯ ಸಮ್ಮೇನದ ಕೃತಜ್ಞತಾಪೂರ್ವಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಪುಂಡಲೀಕ ಮರಾಠೆ, ಸರ್ವರ ಸಹಕಾರದಿಂದ ಸಮ್ಮೇಳನವು ಯಶಸ್ವಿಯಾಗಿದೆ. ಸಭೆಯ ಸಲಹೆಗಳು ಮುಂದಿನ ಸಮ್ಮೇಳನವನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ಮಾಡಲು ಸಹಾಯಕವಾಗಿದೆ ಎಂದರು.
ಸಭೆಯಲ್ಲಿ ಸ್ವಾಗತ ಸಮಿತಿಯ ಕಾರ್ಯಧ್ಯಕ್ಷರು ಮತ್ತು ಎಸ್ ವಿ ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ| ದಯಾನಂದ ಪೈ, ಎಸ್ ವಿ ಎಸ್ ಆಡಳಿತ ಮಂಡಳಿ ಸದಸ್ಯ ಗಣೇಶ್ ಕಿಣಿ, ಎಸ್ ವಿ ಎಸ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ತಂತ್ರಿ, ಕಾಪು ತಾಲೂಕು ಘಟಕದ ಕೋಶಾಧಿಕಾರಿ ವಿದ್ಯಾಧರ ಪುರಾಣಿಕ್, ಸಂಘಟನ ಕಾರ್ಯದರ್ಶಿ ದೀಪಕ್ ಬೀರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿ ಪ್ರಭಾ ಬಿ. ಶೆಟ್ಟಿ, ನವೋದಯ ಸ್ವಸಹಾಯ ಸಂಘದ ಸದಸ್ಯರು, ಭಾಸ್ಕರ ಕಾಮತ್, ಕಿರಣ್ ಕುಮಾರ್, ದಿಲೀಪ್ ಕುಮಾರ್ ಬನ್ಸೊಡೆ, ಗ್ರೆಟ್ಟಾ ಮೊರಸ್ ಪಲಿಮಾರು ಮತ್ತಿತರರು ಉಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಪುಂಡಲೀಕ ಮರಾಠೆ ಸ್ವಾಗತಿಸಿದರು. ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು ವಂದಿಸಿದರು.