ಗಲ್ಫ್ ರಾಷ್ಟ್ರದ ಸುಲ್ತಾನೇಟ್ ಆಪ್ ಓಮನ್ (ಮಸ್ಕತ್) ಇಲ್ಲಿರುವ ಓಮನ್ ಬಿಲ್ಲವಾಸ್ ಸಂಘಟನೆಯ 2023 ರಿಂದ 2024 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಶುಕ್ರವಾರ ನಡೆಯಿತು.
ಸಂಘಟನೆಯ ಸ್ಥಾಪಕ ಸದಸ್ಯರು, ಆಯ್ಕೆ ಸಮಿತಿ, ಬಿಲ್ಲವ ಸಮಾಜದ ಬಾಂಧವರು ಸೇರಿ ನಡೆಸಿದ ಸಭೆಯಲ್ಲಿ ಅಧ್ಯಕ್ಷರಾಗಿ ಸುಜಿತ್ ಎಸ್ ಅಂಚನ್ ಪಾಂಗಳ, ಉಪಾಧ್ಯಕ್ಷರಾಗಿ ಹರೀಶ್ ಸುವರ್ಣ ಮತ್ತು ಪ್ರಪುಲ್ಲ ಶಂಕರ್ ಕಟಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಬೋಳ, ಕೋಶಧಿಕಾರಿಯಾಗಿ ಭಾಸ್ಕರ್ ಕೋಟ್ಯಾನ್ ಮತ್ತು ಪದಾಧಿಕಾರಿಗಳನ್ನು ಆಯ್ಕೆಯಾದರು.