ಕಾಪು : ಕಳತ್ತೂರಿನಲ್ಲಿ ಆರ್ಥಿಕ ಹಿಂದುಳಿದ ನಾಲ್ಕು ಮಹಿಳೆಯರಿಗೆ ಸ್ವಂತ ಮನೆ ನಿರ್ಮಾಣ
Posted On:
26-12-2022 11:13PM
ಕಾಪು : ಆಲ್ ಕಾರ್ಗೋ ಲೋಜಿಸ್ಟಿಕ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಶಶಿಕಿರಣ್ ಶೆಟ್ಟಿಯವರು ದಾನದ ರೂಪದಲ್ಲಿ 2021-22 ಪಟ್ಟಿಯಲ್ಲಿ ಮಂಗಳೂರಿನ ಉದ್ಯಮಿ ಎ.ಜೆ.ಶೆಟ್ಟಿ ಇವರ ಅಧ್ಯಕ್ಷತೆಯ ವಿಶ್ವ ಬಂಟರ ಪ್ರತಿಷ್ಠಾನ ಮಂಗಳೂರು ಇವರ ಮುಖಾಂತರ ಸುಮಾರು 8 ಲಕ್ಷ ವೆಚ್ಚದ 17 ಮನೆ ನಿರ್ಮಾಣಗೊಂಡಿದ್ದು ಅದರಲ್ಲಿ ಕಾಸರಗೋಡು 7 ಮನೆ, ಮಂಗಳೂರು 5 ಮನೆ, ಕುಂದಾಪುರ 1 ಮನೆ ಹಾಗೂ ಕಾಪು ತಾಲೂಕಿನ ಕಳತ್ತೂರು ಗ್ರಾಮಕ್ಕೆ 4 ಮನೆ ನಿರ್ಮಿಸಿ ಕೊಟ್ಟಿರುತ್ತಾರೆ.
17 ಮನೆಯನ್ನು ಮಂಗಳೂರಿನಲ್ಲಿ ನಡೆದ ವಿಶ್ವ ಬಂಟರ ಪ್ರತಿಷ್ಠಾನ ಸಮಾರಂಭದಲ್ಲಿ 17 ಬಂಟ ಸಮಾಜದ ಮಹಿಳೆಯರಿಗೆ ಮನೆಯ ಕೀಯನ್ನು ಹಸ್ತಾಂತರಿಸಲಾಗಿದೆ. ಕಳತ್ತೂರು ಗ್ರಾಮದ 4 ಬಂಟ ಮಹಿಳೆಯರಿಗೆ ಮನೆಯನ್ನು ಡಿಸೆಂಬರ್ 21 ರಂದು ಪ್ರತಿಷ್ಠಾನದ ಸದಸ್ಯರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ಕಳತ್ತೂರಿನ 4 ಫಲಾನುಭವಿಗಳಿಗೆ ಬಂಟ ಪ್ರತಿಷ್ಠಾನದ ಅಧ್ಯಕ್ಷ ಎ.ಜೆ.ಶೆಟ್ಟಿ, ಬಂಟ ಪ್ರತಿಷ್ಠಾನದ ಟ್ರಸ್ಟಿ ಶೇಖರ ಬಿ.ಶೆಟ್ಟಿ, ಕಳತ್ತೂರು ಬಂಟ ಪ್ರತಿಷ್ಠಾನದ ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ ಇವರಿಗೆ ಕಳತ್ತೂರು ಜನ ಸೇವಾ ವೇದಿಕೆಯ ಅಧ್ಯಕ್ಷ ದಿವಾಕರ ಬಿ. ಶೆಟ್ಟಿಯವರು ಮನವಿ ನೀಡಿರುವುದರಿಂದ ಕಳತ್ತೂರು ಗ್ರಾಮಕ್ಕೆ 4 ಮನೆ ನೀಡಿದ್ದಾರೆ. ಕಳತ್ತೂರು ಗ್ರಾಮದ ನಾಲ್ಕು ಮನೆಯನ್ನು ವಿಶ್ವ ಬಂಟರ ಪ್ರತಿಷ್ಠಾನ ಮಂಗಳೂರು ಇದರ ಟ್ರಸ್ಟಿ ಶೇಖರ ಬಿ.ಶೆಟ್ಟಿ ಕಳತ್ತೂರು ಉದ್ಘಾಟಿಸಿದರು. ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಳತ್ತೂರು ಶೇಖರ ಬಿ. ಶೆಟ್ಟಿ, ದಿವಾಕರ ಬಿ. ಶೆಟ್ಟಿ ಕಳತ್ತೂರು ಮತ್ತು ಮನೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಿಕೊಟ್ಟ ಮಕರ ಕನ್ಟ್ರಕ್ಷನ್ ಕಾಪು ಇದರ ಆಡಳಿತ ನಿರ್ದೇಶಕರಾದ ಸುಧಾಕರ್ ಶೆಟ್ಟಿ ಮಲ್ಲಾರು ಇವರನ್ನು ಫಲಾನುಭವಿಗಳ ಪರವಾಗಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಸನ್ಮಾನಿಸಿದರು.
ಕಾಪು ಬಂಟರ ಸಂಘದ ಕಾರ್ಯದರ್ಶಿ ಕೆ. ಲೀಲಾಧರ ಶೆಟ್ಟಿ ಕಾಪು, ಜನಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಕರ್ ಬಿ.ಶೆಟ್ಟಿ ಕಳತ್ತೂರು ವೇದಿಕೆಯಲ್ಲಿದ್ದರು. ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ದಯಾನಂದ ಶೆಟ್ಟಿ ದೆಂದೂರು ಸ್ವಾಗತಿಸಿದರು. ದಿವಾಕರ್ ಡಿ. ಶೆಟ್ಟಿ ಕಳತ್ತೂರು ವಂದಿಸಿದರು.