ಕಾಪು : ಸಮಾಜದ ಅತ್ಯಂತ ಹಿಂದುಳಿದ ಸಮಾಜವನ್ನು ಗುರುತಿಸಿ ಸಮಾಜದ ಅಭಿವೃದ್ಧಿಗೆ ಸರಕಾರದಿಂದ ಅನುದಾನಗಳನ್ನು ದೊರಕಿಸಿ ಕೊಡುವ ನಿರಂತರ ಪ್ರಯತ್ನಗಳನ್ನು ಮಾಡಲಾಗುವುದು. ಸಂಘವು ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಿ ನಿರಂತರ ಚಟುವಟಿಕೆಗಳನ್ನು ನೀಡುವುದು ತುಂಬಾ ಹೆಮ್ಮೆಯಾಗಿದೆ ಎಂದು ಇಂಧನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ ಸುನೀಲ್ ಕುಮಾರ್ ಹೇಳಿದರು.
ಅವರು ಡಿಸೆಂಬರ್ 25 ರಂದು ಕುಲಾಲ ಸಂಘ ನಾನಿಲ್ತಾರ್ (ರಿ.) ಮುಂಡ್ಕೂರು ಇದರ 34ನೇ ವಾರ್ಷಿಕ ಮಹಾಸಭೆ, ಶ್ರೀ ಸತ್ಯನಾರಾಯಣ ಪೂಜೆ ಮತ್ತು ವೈದ್ಯಕೀಯ ನೆರವು, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯ ವಹಿಸಿದ್ದರು. ರಾಜ್ಯ ಸರಕಾರದಿಂದ ಡಿ ದೇವರಾಜ್ ಅರಸು ಪ್ರಶಸ್ತಿ ಪುರಸ್ಕೃತರಾದ ಡಾ| ಅಣ್ಣಯ್ಯ ಕುಲಾಲ್ ದಂಪತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐತು ಕುಲಾಲ್ ಕನ್ಯಾನ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಮುಂಬೈ ಉದ್ಯಮಿ ಸುನಿಲ್ ಸಾಲ್ಯಾನ್, ಮುಂಬೈ ಕುಲಾಲ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ದೇವ್ ದಾಸ್ ಕುಲಾಲ್, ವಕೀಲರಾದ ಸುನೀಲ್ ಎಸ್ ಮೂಲ್ಯ, ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಪ್ರತೀಮಾ ಶ್ರೀಧರ್, ಯುವ ವೇದಿಕೆ ಅಧ್ಯಕ್ಷರಾದ ದೀಪಕ್ ಬೆಳ್ಮಣ್, ಸಾಂಸ್ಕೃತಿಕ ಕಾರ್ಯದರ್ಶಿ ಹರ್ಷಿತ, ಮುಂಬೈ ಸುಕುಮಾರ್ ಸಾಲ್ಯಾನ್, ಸಂಘದ ಉಪಾಧ್ಯಕ್ಷರಾದ ಬೊಗ್ಗು ಮೂಲ್ಯ ಬೇಲಾಡಿ, ಜಯರಾಮ್ ಕುಲಾಲ್ ಅಗರಟ್ಟ, ಮಂಜ್ಜಪ ಮೂಲ್ಯ, ಜಗನ್ನಾಥ ಮೂಲ್ಯ ಬೆಳ್ಮಣ್, ಗೋಪಾಲ್ ಮೂಲ್ಯ, ರತ್ನ ಜಿ ಮೂಲ್ಯ, ಸಂತೋಷ್ ಕುಲಾಲ್, ಲೋಕೆಶ್ ಕುಲಾಲ್, ಚಂದ್ರಹಾಸ್ ಕುಲಾಲ್, ಗಣೇಶ್ ಮೂಲ್ಯ ಬೋಳ, ಶಿಕ್ಷಕರಾದ ದೇವಿಪ್ರಸಾದ್ ಸ್ವಾಗತಿಸಿದರು. ಆಶಾ ವರದರಾಜ್ ವಂದಿಸಿದರು.