ಮೂಲ್ಕಿ : ಮೂಲ್ಕಿ - ಮೂಡಬಿದ್ರಿ ಕ್ಷೇತ್ರದ ಶಿಮಂತೂರ್ ಗ್ರಾಮದ ಬಲೆಪುವಿನಲ್ಲಿ ಉಮೇಶ್ ಕೆ. ಬಂಜನ್ ರವರು ಮರ ಕಡಿಯುವ ಸಂದರ್ಭದಲ್ಲಿ ಮರದ ತುಂಡು ತಲೆಯ ಮೇಲೆ ಬಿದ್ದು ವ್ಯಕ್ತಿಯೋರ್ವರು ದುರ್ಮರಣಕ್ಕೀಡಾಗಿದ್ದಾರೆ.
ಈ ಬಗ್ಗೆ ಹೆಜಮಾಡಿ ಗ್ರಾಮ ಪಂಚಾಯತ್ ಸದಸ್ಯ, ಸಾಮಾಜಿಕ ಕಾರ್ಯಕರ್ತ ಪ್ರಾಣೇಶ್ ಹೆಜಮಾಡಿ ಮೂಲ್ಕಿ - ಮೂಡಬಿದ್ರಿ ಕ್ಷೇತ್ರದ ಶಾಸಕರಾದ ಉಮನಾಥ ಕೋಟ್ಯಾನ್ ಇವರಿಗೆ ಮನವಿ ನೀಡಿದ್ದು ತಕ್ಷಣ ಕುಟುಂಬ ವರ್ಗಕ್ಕೆ ಪರಿಹಾರ ಸಿಗುವಂತೆ ಆಗ್ರಹಿಸಿದ್ದಾರೆ.