ಕಾಪು : ಇಲ್ಲಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪು ರಾಜೀವ ಭವನದಲ್ಲಿ ಗುರುವಾರ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಸಮ್ಮಾನ : ಕಾಪು ತಾಲೂಕಿನ ಪತ್ರಕರ್ತರು, ಮಾಜಿ ಯೋಧರು, ಸಮಾಜ ಸೇವಕರು, ಕಾಪು ಪುರಸಭಾ ಪೌರಕಾರ್ಮಿಕರನ್ನು ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಮ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ವಿನಯ ಕುಮಾರ್ ಸೊರಕೆ ನಾನು ನನ್ನ ರಾಜಕೀಯ ಜೀವನದಲ್ಲಿ ಬಿಳಿ ಬಟ್ಟೆ ಧರಿಸುವಂತೆ ಜೀವನದಲ್ಲಿಯೂ ಶುಭ್ರವಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕೀಯದಲ್ಲಿದ್ದೇನೆ. ಎಂದಿಗೂ ಹಿಂಬಾಗಿಲ ಪ್ರವೇಶಕ್ಕಾಗಿ ಕಾಯಲಿಲ್ಲ. ಜನರೊಂದಿಗೆ ಮುಂದೆಯೂ ಇರುತ್ತೇನೆ ಎಂದರು.
ಈ ಸಂದರ್ಭ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಮಾಜಿ ಅಧ್ಯಕ್ಷ ನವೀನ್ಚಂದ್ರ ಜೆ ಶೆಟ್ಟಿ, ದಿವಾಕರ್ ಶೆಟ್ಟಿ, ಶಿವಾಜಿ ಸುವರ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಂತಲತಾ ಶೆಟ್ಟಿ, ದೀಪಕ್ ಕುಮಾರ್ ಎರ್ಮಾಳು, ಗಣೇಶ್ ಕೋಟ್ಯಾನ್, ರಮೀಝ್ ಹುಸೇನ್, ವೈ ಸುಧೀರ್ ಕುಮಾರ್, ಶರ್ಫುದ್ದೀನ್ ಶೇಕ್, ಜ್ಯೋತಿ ಮೆನನ್, ಸಾಧಿಕ್, ಅಶ್ವಿನಿ ಕಾಪು, ಮೊಯ್ದಿನಬ್ಬ ಮತ್ತಿತರರು ಉಪಸ್ಥಿತರಿದ್ದರು.