ಶಂಕರಪುರ : ಜೆಸಿಐ ಜಾಸ್ಮಿನ್ ಬೆಳ್ಳಿ ಹಬ್ಬದ ಸಂಭ್ರಮ ; ಶಾಶ್ವತ ಕೊಡುಗೆಗಳ ಉದ್ಘಾಟನೆ ; ಸಾಲ್ಮರ ಫ್ರೆಂಡ್ಸ್ ವಾರ್ಷಿಕೋತ್ಸವ
Posted On:
06-01-2023 11:42AM
ಶಂಕರಪುರ : ಕಾಪು ತಾಲೂಕಿನ ಜೆಸಿಐ ಶಂಕರಪುರ ಜಾಸ್ಮಿನ್ ಘಟಕದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ, ಶಾಶ್ವತ ಕೊಡುಗೆಗಳ ಉದ್ಘಾಟನೆ, ಸಾಲ್ಮರ ಫ್ರೆಂಡ್ಸ್ ಶಂಕರಪುರ ಇದರ ವಾರ್ಷಿಕೋತ್ಸವ ಸಮಾರಂಭವನ್ನು ವಲಯ 15ರ ಪೂರ್ವ ಮಲಯಾಧ್ಯಕ್ಷರು ಮತ್ತು ರಾಷ್ಟ್ರೀಯ ತರಬೇತುದಾರರಾದ ಜೆಸಿ ರಾಜೇಂದ್ರ ಭಟ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು 24 ವರುಷದಿಂದ ಈ ಘಟಕ ಉತ್ತಮ ಸಮಾಜ ಸೇವೆ ಮತ್ತು ಯುವಕರ ವ್ಯಕ್ತಿತ್ವ ವಿಕಸನವನ್ನು ಮಾಡುತ್ತಾ ಬಂದಿರುತ್ತದೆ ಎಂದು ಶ್ಲಾಘಿಸಿದರು.
ಸೈoಟ್ ಜೋನ್ಸ್ ಚರ್ಚ್ ನ ಧರ್ಮಗುರುಗಳಾದ ಫರ್ಡಿನಾಂಡ್ ಗೋನ್ಸಾಲಿಸ್ ಆಶೀರ್ವಚನವಿತ್ತರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಶಿಧರ್ ಕೆ ಶೆಟ್ಟಿ ಇನ್ನಂಜೆ ಉದ್ಯಮಿ ಮುಂಬೈ, ಅಭಿನಂದನ್ ಎ ಶೆಟ್ಟಿ ಫಾಸ್ಟ್ ಗವರ್ನರ್ ರೋಟರಿ ಜಿಲ್ಲೆ 3182, ಗ್ರೇಗೋರಿ ಮಾತಾಯಸ್ ಮಾತಾಯಸ್ ಹೇರಿಟೇಜ್ ಇನ್ನಂಜೆ, ಎಲಿಯಾಸ್ ಮೋನಿಸ್ ಸಿವಿಲ್ ಇಂಜಿನಿಯರ್ ಸಲ್ಮಾರ, ಕಾರ್ಯಕ್ರಮ ಸಂಯೋಜಕರಾದ ಜೆಸಿ ಸಂತೋಷ್ ಕುಮಾರ್, ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಜಗದೀಶ್ ಅಮಿನ್, ಜೆಸಿರೇಟ್ ಅಧ್ಯಕ್ಷರಾದ ಜಯಶ್ರೀ ನವೀನ್ ಅಮೀನ್, ಜೆಜೆಸಿ ಅಧ್ಯಕ್ಷರಾದ ಶಶಾಂಕ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೆಸಿಐ ಶಂಕರಪುರ ಜಾಸ್ಮಿನ್ ಘಟಕದ ಸ್ಥಾಪಕ ಕಾರ್ಯದರ್ಶಿ ಮತ್ತು ಸಾಲ್ಮರ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಜೆಸಿ ನವೀನ್ ಅಮೀನ್ ಇವರು ಪ್ರಸ್ತಾವನೆಗೈದರು, ಜೆ ಸಿ ಐ ಶಂಕರಪುರ ಜಾಸ್ಮಿನ್ ಘಟಕದ ಮಾಲಿನಿ ಶೆಟ್ಟಿ ಇನ್ನಂಜೆ ಸ್ವಾಗತಿಸಿದರು. ಕಾರ್ಯದರ್ಶಿಯಾದ ಜೆ ಸಿ ಪ್ರವೀಣ್ ಪೂಜಾರಿ ವಂದಿಸಿದರು.